ಬದಿಯಡ್ಕ: ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಎಪ್ರಿಲ್ 28ರಂದು ಸಂಜೆ 6 ಗಂಟೆಗೆ ಎಡನೀರು ಶ್ರೀಮಠಕ್ಕೆ ಚಿತ್ತೈಸಲಿದ್ದಾರೆ. ಶ್ರೀಮಠದಲ್ಲಿ ವಾಸ್ತವ್ಯ ಇರುವ ಶ್ರೀ ಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಮಠದಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಆಶೀರ್ವಚನದೊಂದಿಗೆ ಮಾರ್ಗದರ್ಶನ ನೀಡಿದರು. ಶ್ರೀ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮುರಳಿ ತಂತ್ರಿ ಕುಂಟಾರು, ಶಿವರಾಮ ಭಟ್ ಪೆರಡಾಲ, ವೆಂಕಟ ಕೃಷ್ಣ ಭಟ್, ವೇಣುಗೋಪಾಲ ಮಾಸ್ಟರ್, ಭವಾನಿ ಶಂಕರ, ಸೂರ್ಯ ಭಟ್ ಎಡನೀರು, ಉಮೇಶ್ ಎಡನೀರು, ಕಮಲಾಕ್ಷ ಎಡನೀರು, ಮಹೇಶ್ ವಳಕುಂಜ, ಗಣೇಶ್ ಭಟ್ ಅಳಕ್ಕೆ, ಸಿ.ಯಚ್.ಗೋಪಾಲ ಭಟ್, ವಿಜಯ ಕುಮಾರ್, ತೇಜಸ್ವೀ ಹೇರಳ, ಈಶ್ವರ ಭಟ್, ಗಣೇಶ್ ಭಟ್ ಕುಜರಕಾನ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಎಡನೀರು ವಂದಿಸಿದರು.