HEALTH TIPS

ಎಲ್ಲದಕ್ಕೂ ಉಚಿತವಾಗಿ ಗೂಗಲ್​ ಸರ್ಚ್​ ಮಾಡುವ ದಿನಗಳು ಶೀಘ್ರದಲ್ಲೇ ಅಂತ್ಯ! ಶುಲ್ಕ ಪಾವತಿಸಲು ರೆಡಿಯಾಗಿ

 ವದೆಹಲಿ: ನಮಗೆ ಏನೇ ಅನುಮಾನ ಬಂದರೂ ಅದನ್ನು ಪರಿಹರಿಸಿಕೊಳ್ಳಲು ತಕ್ಷಣವೇ ಗೂಗಲ್​ ಸರ್ಚ್​ ಮಾಡುತ್ತೇವೆ. ಆದರೆ, ತಾಜಾ ವರದಿಗಳ ಪ್ರಕಾರ ಇಲ್ಲಿಯವರೆಗೂ ಉಚಿತವಾಗಿದ್ದ ಈ ಸೇವೆಯನ್ನು ಇನ್ಮುಂದೆ ಹಣ ಕೊಟ್ಟು ಪಡೆಯಬೇಕಾಗುತ್ತದೆ. ಗೂಗಲ್​ ಸರ್ಚ್​ಗೆ ಶುಲ್ಕ ವಿಧಿಸಲು ಕಂಪನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಗೂಗಲ್​ ಕಂಪನಿಯು ಸರ್ಚ್ ಇಂಜಿನ್‌ನಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಪರಿಗಣಿಸುತ್ತಿದೆ ಮತ್ತು ಪ್ರೀಮಿಯಂ ಫೀಚರ್ಸ್​ ಶುಲ್ಕ ವಿಧಾನವನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದೆ ಮಾತಿದೆ. ಈ ಪ್ರೀಮಿಯಂ ಫೀಚರ್ಸ್​ ಕೃತಕ ಬುದ್ಧಿಮತ್ತೆಯೊಂದಿಗೆ (AI) ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಈಗಾಗಲೇ ಒಂದು ಸುಳಿವು ನೀಡಿದೆ.

ಕೆಲವು ಸಮಯದ ಹಿಂದೆ, ಕಂಪನಿಯು ಗೂಗಲ್ ಸರ್ಚ್​ನೊಂದಿಗೆ ಜನರೇಟಿವ್ ಎಐ ಸ್ನ್ಯಾಪ್‌ಶಾಟ್ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಇದೀಗ ಸರ್ಚ್​ ಇಂಜಿನ್​ ವಿಚಾರದಲ್ಲೂ ಪ್ರಾಯೋಗಿಕವಾಗಿ ಮಾಡುವ ಗುರಿಯನ್ನು ಹೊಂದಿದೆ. ತಮ್ಮ ಪ್ರಯೋಗ ಯಶಸ್ಸು ಕಂಡಲ್ಲಿ, ಮುಂದಿನ ದಿನಗಳಲ್ಲಿ ಸರ್ಚ್​ ಇಂಜಿನ್​ ಸೇವೆಯನ್ನೂ ಸಹ ಹಣ ಕೊಟ್ಟು ಪಡೆಯಬೇಕಾಗುತ್ತದೆ.

ಪ್ರೀಮಿಯಂ ಚಂದಾದಾರಿಕೆಗಳೊಂದಿಗೆ ಎಐ ಫೀಚರ್​ಗಳನ್ನು ಸಂಯೋಜಿಸುವ ಆಯ್ಕೆಗಳನ್ನು ಗೂಗಲ್​ ಅನ್ವೇಷಿಸುತ್ತಿದೆ. ಜಿಮೇಲ್ ಮತ್ತು ಡಾಕ್ಸ್ ಜೊತೆಗೆ, ಕಂಪನಿಯು ಎಐ ಅಸಿಸ್ಟೆಂಟ್ ಫೀಚರ್ಸ್​ ಸಹ ನೀಡಲಿದೆ.

ಈ ವಿಚಾರವನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಆದರೆ, ಸರ್ಚ್​ ಇಂಜಿನ್​ಗೆ ಗೂಗಲ್​ ಶುಲ್ಕ ವಿಧಿಸಿದರೆ ಅಚ್ಚರಿಪಡಬೇಕಿಲ್ಲ. ಇದುವರೆಗೂ ಉಚಿತವಾಗಿ ಸೇವೆ ನೀಡುತ್ತಿದ್ದ ಪೇಟಿಎಂ, ಫೋನ್​ಪೇ ಹಾಗೂ ಗೂಗಲ್​ಪೇಗಳು ಇದೀಗ ಮೊಬೈಲ್​ ರೀಚಾರ್ಜ್​ ಮೇಲೆ ಶುಲ್ಕ ವಿಧಿಸುತ್ತಿವೆ. ಮುಂದಿನ ದಿನಗಳಲ್ಲಿ ದಿನದ ವಹಿವಾಟಿನ ಮಿತಿ ಹೇರಿ, ಅದರ ಮೇಲೆ ನಡೆಸುವ ವಹಿವಾಟುಗಳಿಗೆ ಶುಲ್ಕ ವಿಧಿಸಿದರೂ ಅಚ್ಚರಿ ಪಡಬೇಕಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries