ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ತೃಕ್ಕರಿಪುರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪಡನ್ನ ಕಡಪ್ಪುರದಲ್ಲಿ ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರ ಚುನಾವಣಾ ಪ್ರಚಾರ ಸಭೆಗೆ ಸಿಪಿಎಂ ಕಾರ್ಯಕರ್ತರು ಅಡಚಣೆ ಉಂಟು ಮಾಡಿದ ದೂರಿನ ಹಿನ್ನೆಲೆಯಲ್ಲಿ ಚಂದೇರ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಕಾಲಿಕಡವಿನಿಂದ ಚುನಾವಣಾ ಪ್ರಚಾರ ಆರಂಭಿಸಿದ ಎಂ.ಎಲ್.ಅಶ್ವಿನಿ ಅವರು ವೆಳ್ಳಿಚ್ಚಾಲ್, ಕರಿಪಾರತ್ತ್, ಉದಿನೂರು, ಓರಿ, ಮಾವಿಲಕಡಪುರ ಮೊದಲಾದೆಡೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ಪಡನ್ನ ಕಡಪ್ಪುರದಲ್ಲಿ ಪ್ರಚಾರ ಸಭೆಗೆ ಸಿಪಿಎಂ ಕಾರ್ಯಕರ್ತರು ತಡೆಯೊಡ್ಡಿದರು. ಮಾತ್ರವಲ್ಲ ಅಭ್ಯರ್ಥಿಯನ್ನು ನಿಂದಿಸಿದ್ದಾಗಿ ಪೆÇಲೀಸರಿಗೆ ದೂರು ನೀಡಲಾಗಿತ್ತು.