ಕೋಝಿಕ್ಕೋಡ್: ಕೇರಳ ಮುಸ್ಲಿಂ ಕಲ್ಚರಲ್ ಸೊಸೈಟಿ (ಕೆಎಂಸಿಸಿ) ಉತ್ತರ ಕೇರಳದ ಅನಿವಾಸಿ ಮತದಾರರನ್ನು ಚುನಾವಣೆ ಹಿನ್ನೆಲೆಯಲ್ಲಿ ಊರಿಗೆ ಕರೆತರಲು ಪ್ರಯತ್ನಿಸುತ್ತಿದೆ.
ಕಳೆದ 7 ದಿನಗಳಲ್ಲಿ 190 ಮತದಾರರನ್ನು ಊರಿಗೆ ಕರೆತರಲಾಗಿದೆ ಎಂದು ಗ್ಲೋಬಲ್ ಕೆಎಂಸಿಸಿ ಅಧ್ಯಕ್ಷ ಇಪಿ ಉಬೈದುಲ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋಝಿಕ್ಕೋಡ್ ಜಿಲ್ಲಾ ದುಬೈ ಕೆಎಂಸಿಸಿ ನೇತೃತ್ವದಲ್ಲಿ ನಿನ್ನೆ 122 ಮಂದಿ ಕೋಝಿಕ್ಕೋಡ್‍ಗೆ ಬಂದಿಳಿದರು. ಇವರಲ್ಲಿ ಹೆಚ್ಚಿನವರು ವಡಗರ ಕ್ಷೇತ್ರದ ಮತದಾರರು. ಶುಕ್ರವಾರದಿಂದಲೇ ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ ತೆರಳುವ ವಿಮಾನಗಳಲ್ಲಿ ಮತದಾನಗೈಯ್ಯುವ ಉತ್ಸಾಹದಲ್ಲಿ ಬರುವವರ ನೂಕುನುಗ್ಗಲು ಕಂಡುಬಂದಿದೆ. ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ವಿದೇಶೀ ಸಂಸ್ಥೆಗಳು ಮುಖ್ಯವಾಗಿ ಟ್ರಾವೆಲ್ ಏಜೆನ್ಸಿಗಳಿಗೆ ಸಂಬಂಧಿಸಿದ ಟಿಕೆಟ್‍ಗಳನ್ನು ನೀಡುತ್ತವೆ. ಚಾರ್ಟಿಂಗ್ ಮೂಲಕವೂ ಮತದಾರರನ್ನು ಮನೆಗೆ ಕರೆತರಲು ಸಂಘಟನೆಗಳು ಪ್ರಯತ್ನಿಸುತ್ತಿವೆ.
ಕೋಝಿಕ್ಕೋಡ್ ಜಿಲ್ಲೆಯಲ್ಲಿ 35793 ಅನಿವಾಸಿ ಮತದಾರರಿದ್ದಾರೆ. ವಯನಾಡಿನಲ್ಲಿ ಸುಮಾರು ಹತ್ತು ಸಾವಿರ. ಕೆಎಂಸಿಸಿಗೆ ಸೇರಿದ ಬಹುತೇಕರು ಮನೆಮನೆಗೆ ಬಂದು ಮತಯಾಚನೆ ಮಾಡುತ್ತಿದ್ದಾರೆ.