ನವದೆಹಲಿ: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ.
ನವದೆಹಲಿ: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ.
ಟೆಲಿಕಾಂ ಸಂಪರ್ಕ ಸಿಕ್ಕಿರುವ ಸಂಗತಿಯನ್ನು ಕೇಂದ್ರ ದೂರಸಂಪರ್ಕ ಇಲಾಖೆ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದೆ.
ಕೌರಿಕ್ ಹಳ್ಳಿಯು ಟಿಬೆಟ್ ಗಡಿಗೆ ಹತ್ತಿರದಲ್ಲಿದೆ. ಸ್ಪಿತಿ ನದಿ ಸಂಗಮವಾಗುವ ಮೊದಲು ಪರಂಗ್ ಅಥವಾ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ. ಗುಯೆ ಸ್ಪಿತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಭಾರತ-ಚೀನಾ ಗಡಿಯಿಂದ ಕೆಲವು ಕಿಲೋ ಮೀಟರ್ ದೂರದಲ್ಲಿದೆ.