ಕಣ್ಣೂರು :ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಸಮೀಪದ ಕಣ್ಣಾಪ್ಪುರದಲ್ಲಿ ಇಂದು ನಡೆದಿದೆ.
ಕಣ್ಣೂರು :ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಸಮೀಪದ ಕಣ್ಣಾಪ್ಪುರದಲ್ಲಿ ಇಂದು ನಡೆದಿದೆ.
ಕಟ್ಟತ್ತಡ್ಕ ಮುಹಿಮ್ಮತ್ ನಗರದ ಅಬೂಬಕ್ಕರ್ ಸಿದ್ದೀಕ್ (20) ಮೃತ ವಿದ್ಯಾರ್ಥಿ.
ಕಣ್ಣೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಕಣ್ಣೂರು ರೈಲ್ವೆ ನಿಲ್ದಾಣ ಸಮೀಪ ಈ ಅಪಘಾತ ನಡೆದಿದೆ. ಕಣ್ಣೂರು ಕಡೆಗೆ ತೆರಳುತ್ತಿದ್ದ ಲಾರಿ ಮತ್ತು ಬೈಕ್ ನಡುವೆ ಅಪಘಾತ ಉಂಟಾಗಿದೆ. ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ನಿಂದ ಅನ್ಸಾರ್ ನ ಗುರುತು ಪತ್ತೆ ಹಚ್ಚಲಾಗಿದೆ. ಕಣ್ಣಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.