ಕಾಸರಗೋಡು: ತೆಂಗಿನ ಕಾಯಿ ಸುಲಿಯುವ ಸಲಕರಣೆಯಿಂದ ತಲೆಗೆ ಬಡಿದು ತಂದೆಯನ್ನು ಸ್ವತ: ಪುತ್ರನೇ ಕೊಲೆಗೈದ ಘಟನೆ ಬೇಕಲ ಪಒಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆಯಲ್ಲಿ ನಡೆದಿದೆ. ಇಲ್ಲಿನ ಸೈಂಟ್ ಮೇರೀಸ್ ಶಾಲೆ ಸನಿಹದ ನಿವಾಸಿ ಅಪ್ಪಕುಞÂ(65)ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಇವರ ಪುತ್ರ, ಪಿ.ಟಿ ಪ್ರಮೋದ್(37)ನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಪ್ರಮೋದ್ ಬಲವಂತವಾಗಿ ಮನೆ ಕೊಠಡಿಯೊಳಗೆ ನುಗ್ಗಿ ತೆಂಗಿನ ಕಾಯಿ ಸುಲಿಯುವ ಸಲಕರಣೆಯಿಂದ ಅಪ್ಪಕುಞÂ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ಸಂದರ್ಭ ಬೊಬ್ಬಿಟ್ಟಾಗ ಆಸುಪಾಸಿನವರು ಹಾಗೂ ಸಂಬಂಧಿಕರು ಧಾವಿಸಿ ಬಂದಾಗ ಅಪ್ಪಕುಞÂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ, ತಡರಾತ್ರಿ ಮೃತಪಟ್ಟಿದ್ದರು.
ಪುತ್ರನ ವಿರುದ್ಧ ದೂರು ನೀಡಿದ್ದ ತಂದೆ:
ಈ ಹಿಂದೆಯೂ ಅಪ್ಪಕುಞÂ ಅವರ ಮೇಲೆ ಪ್ರಮೋದ್ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಭಾನುವಾರ ಮಧ್ಯಾಹ್ನ ಮಾರಕಾಯುಧದಿಂದ ತನ್ನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಅಪ್ಪಕುಞÂ ಅವರು ಬೇಕಲ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಪ್ರಮೋದ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ತನ್ನ ವಿರುದ್ಧ ಕೇಸು ನೀಡಿದ ದ್ವೇಷದಿಂದ ತಲೆಗೆ ಬಡಿದು ತಂದೆಯನ್ನು ಕೊಲೆಗೈದಿರಬೇಕೆಂದು ಸಂಶಯಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈತ ಅಮಿತ ಮದ್ಯಪಾನಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.