HEALTH TIPS

ಬಡ ಜನರ ವಿರುದ್ದ ಸರ್ಕಾರದ ಧೋರಣೆ: ವಿಷಣ್ಣರಾಗಿ ಪ್ರತಿಭಟನೆ ಅಂತ್ಯಗೊಳಿಸಿದ ಸಿಪಿಒ ವಿಜೇತರು

                  ತಿರುವನಂತಪುರ: ಸಿಪಿಒ ರ್ಯಾಂಕ್ ವಿಜೇತರು 62 ದಿನಗಳಿಂದ ಸೆಕ್ರೆಟರಿಯೇಟ್ ಎದುರು ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ.

                   ನಿನ್ನೆಗೆ  ಯಾರ್ಂಕ್ ಪಟ್ಟಿಯ ಅವಧಿ ಮುಗಿದಿದೆ. ಎಡ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಬಡ ಜನರ ಬಗ್ಗೆ ಸರ್ಕಾರ ಕ್ರೂರ ಧೋರಣೆ ತೋರಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಡಿವೈಎಫ್‍ಐ ಯವರು ಇತ್ತ ತಿರುಗಿ ನೋಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

                   13,975 ಅಭ್ಯರ್ಥಿಗಳನ್ನು ಒಳಗೊಂಡ ರ್ಯಾಂಕ್ ಪಟ್ಟಿಯಲ್ಲಿ ಇದುವರೆಗೆ 4436 ಅಭ್ಯರ್ಥಿಗಳು ಮಾತ್ರ ನೇಮಕಗೊಂಡಿದ್ದಾರೆ. ರ ್ಯಾಂಕ್ ಪಟ್ಟಿಯಲ್ಲಿದ್ದರೂ ಶೇ.68 ರಷ್ಟು ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಶಿಫಾರಸು ಬಂದಿಲ್ಲ. ರ ್ಯಾಂಕ್ ಪಟ್ಟಿಯ ಅವಧಿ ಮುಗಿದಿದ್ದು, ಸಾವಿರಾರು ಯುವಕರ ನಿರೀಕ್ಷೆ ಹುಸಿಯಾಗಿದೆ. ಹುಲ್ಲು ತಿಂದು, ಮೊಣಕಾಲೂರಿ ತೆವಳುತ್ತಾ, ತಲೆ ಬೋಳಿಸಿಕೊಂಡು ಸಾಂಕೇತಿಕ ಅಂತ್ಯಕ್ರಿಯೆ ನೆರವೇರಿಸಿ ಅಭ್ಯರ್ಥಿಗಳು ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸಿದರು. ಉಪವಾಸ ನಡೆದರೂ ಸರ್ಕಾರದಿಂದ ಯಾವುದೇ ಅನುಕೂಲಕರ ನಿರ್ಧಾರವಾಗಿಲ್ಲ. ಸೆಕ್ರೆಟರಿಯೇಟ್ ಎದುರು ರಸ್ತೆ ತಡೆ ನಡೆಸಿದ್ದು ಸಂಘರ್ಷಕ್ಕೆ ನಾಂದಿ  ಹಾಡಿತ್ತು.

                 ಸರ್ಕಾರ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಮೋಸ ಮಾಡಿದ್ದು, ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಅಭ್ಯರ್ಥಿಗಳು ಹೇಳುತ್ತಾರೆ. ಪಿಎಸ್‍ಸಿ ಸರ್ಕಾರ ನಿರ್ಧರಿಸಬೇಕು ಎಂಬ ನಿಲುವು ಹೊಂದಿದೆ. ಪ್ರತಿಭಟನೆ ವೇಳೆ ಇಬ್ಬರು ವ್ಯಕ್ತಿಗಳು ತಮ್ಮ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಬಳಿಕ ರಾಜ್ಯ ಪೋಲೀಸ್ ವರಿಷ್ಠಾಧಿಕಾರಿ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಬೇಡಿಕೆಗಳು ಸಮಂಜಸವಾಗಿದ್ದು, ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ಪೋಲೀಸ್ ಮುಖ್ಯಸ್ಥರು ಉತ್ತರಿಸಿದರು.

              ಅಭ್ಯರ್ಥಿಗಳು ಮುಖ್ಯಮಂತ್ರಿ ಹಾಗೂ ಇತರರಿಗೆ ನೂರಾರು ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries