ಕಾಸರಗೋಡು: ಜಿಲ್ಲಾದ್ಯಂತ ವಿಷು ಹಬ್ಬವನ್ನು ಭಾನುವಾರ ಸಂಭ್ರಮದಿಂದ ಅಚರಿಸಲಾಯಿತು. ಕುಂಬಳೆ ಸೀಮೆಯ ಅತಿ ಪುರಾತನ ಹಾಗೂ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದದಲ್ಲಿ ಬೆಳಗ್ಗೆ ವಿಷು ಕಣಿದರ್ಶನದೊಂದಿಗೆ ವಿಷು ಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, ಪಂಚವಾದ್ಯ, ತುಲಾಭಾರ ಸೇವೆ, ಉತ್ಸವಬಲಿ ನಡೆಯಿತು.
ಕೃಷಿ ಸಮೃದ್ಧಿ ಹಾಗೂ ಐಶ್ವರ್ಯದ ಸಂಕೇತವಾಗಿರುವ ವಿಷು ಹಬ್ಬದ ಅಂಗವಾಗಿ ಜಿಲ್ಲೆಯ ನಾನಾ ದೇಗುಲ, ದೈವಸ್ಥಾನ, ತರವಾಡು ಮನೆಗಳಲ್ಲಿ ವಿಶೇಷ ಪೂಜೆ, ವಿಷು ಕಣಿದರ್ಶನ ನಡೆಯಿತು. ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿತ್ತು. ವಿಷು ಹಬ್ಬದಂದು ಜನತೆ ಹೊಸ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತರವಾಡು ಮನೆಗಳಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆದುಕೊಂಡರು.
ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ, ಗುರುವಾಯೂರು ಶ್ರೀಕೃಷ್ಣ ದೇವಾಲಯ ಸೇರಿದಂತೆ ಕೇರಳದ ದೇಗುಲಗಳಲ್ಲಿ ಭಕ್ತಿ, ಸಂಭ್ರಮದಿಂದ ವಿಷು ಹಬ್ಬವನ್ನು ಆಚರಿಸಲಾಯಿತು.