ಮುಂಬೈ: ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ ಮಹಾರಾಷ್ಟ್ರದ ಆಡಳಿತ ಭಾಷೆಯಾದ ಮರಾಠಿಯ ಜೊತೆ ಬೇರೆ ಭಾಷೆಗಳಲ್ಲಿಯೂ ನಾಮಫಲಕ ಅಳವಡಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಹೇಳಿದೆ.
ಮುಂಬೈ: ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ ಮಹಾರಾಷ್ಟ್ರದ ಆಡಳಿತ ಭಾಷೆಯಾದ ಮರಾಠಿಯ ಜೊತೆ ಬೇರೆ ಭಾಷೆಗಳಲ್ಲಿಯೂ ನಾಮಫಲಕ ಅಳವಡಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಹೇಳಿದೆ.
ಪಾತೂರ್ ಮುನಿಸಿಪಲ್ ಕೌನ್ಸಿಲ್‌ನಲ್ಲಿ ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ನಾಮಫಲಕ ಅಳವಡಿಸಲಾಗಿತ್ತು.
ಉರ್ದುವಿನಲ್ಲಿ ನಾಮಫಲಕ ಅಳವಡಿಸಿದ್ದಕ್ಕಾಗಿ ತಕ್ಷಣ ಕ್ರಮ ಜರುಗಿಸುವಂತೆ ಅಕೋಲಾ ಜಿಲ್ಲಾ ಮರಾಠಿ ಭಾಷಾ ಸಮಿತಿಯ ಅಧ್ಯಕ್ಷರಿಗೆ ಸೂಚಿಸಬೇಕು ಎಂದು ವರ್ಷಾ ಬಾಗಡೆ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಲಾಗಿತ್ತು.