ತಿರುವನಂತಪುರಂ: ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗುವಂತೆ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಮಾಹಿತಿ ನೀಡಿದ್ದಾರೆ.
ವಿದ್ಯುನ್ಮಾನ ಮತಯಂತ್ರದಲ್ಲಿ ಮೋಸವಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ರಾಜ್ಯದಲ್ಲಿ 12 ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂ, ಎರ್ನಾಕುಳಂ ನಗರ ಮತ್ತು ತ್ರಿಶೂರ್ ನಗರದಲ್ಲಿ ತಲಾ ಎರಡು ಮತ್ತು ತಿರುವನಂತಪುರಂ ಗ್ರಾಮಾಂತರ, ಕೊಲ್ಲಂ ನಗರ, ಪತ್ತನಂತಿಟ್ಟ, ಅಲಪ್ಪುಳ, ಪಾಲಕ್ಕಾಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಪಡಿಸಲು ಸುಳ್ಳು ಪ್ರಚಾರ ಮಾಡುವವರನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಿಗಾ ಇಡಲಾಗಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಮಾಧ್ಯಮ ನಿಗಾ ಘಟಕಗಳು ಮತ್ತು ಪೋಲೀಸರು ತೀವ್ರ ನಿಗಾ ಇರಿಸಿದ್ದಾರೆ. ಸಾರ್ವಜನಿಕರು ಚುನಾವಣಾ ಸಂಬಂಧಿತ ನಕಲಿ ಪ್ರಚಾರಗಳ ಬಗ್ಗೆ ಪೆÇಲೀಸರ ಸಾಮಾಜಿಕ ಮಾಧ್ಯಮ ನಿಗಾ ತಂಡಗಳಿಗೆ ಮಾಹಿತಿ ನೀಡಬಹುದು.
*ವಾಟ್ಸ್ ಆಫ್ ಸಂಖ್ಯೆಗಳು:
ಸೈಬರ್ ಪ್ರಧಾನ ಕಛೇರಿ - 9497942700
ತಿರುವನಂತಪುರಂ ನಗರ - 9497942701
ತಿರುವನಂತಪುರಂ ಗ್ರಾಮಾಂತರ – 9497942715
ಕೊಲ್ಲಂ ನಗರ - 9497942702
ಕೊಲ್ಲಂ ಗ್ರಾಮಾಂತರ – 9497942716
ಪತ್ತನಂತಿಟ್ಟ – 9497942703
ಆಲಪ್ಪುಳ – 9497942704
ಕೊಟ್ಟಾಯಂ – 9497942705
ಇಡುಕ್ಕಿ – 9497942706
ಎರ್ನಾಕುಳಂ ನಗರ - 9497942707
ಎರ್ನಾಕುಳಂ ಗ್ರಾಮಾಂತರ – 9497942717
ತ್ರಿಶೂರ್ ನಗರ - 9497942708
ತ್ರಿಶೂರ್ ಗ್ರಾಮಾಂತರ – 9497942718
ಪಾಲಕ್ಕಾಡ್ - 9497942709
ಮಲಪ್ಪುರಂ – 9497942710
ಕೋಝಿಕ್ಕೋಡ್ ನಗರ - 9497942711
ಕೋಝಿಕ್ಕೋಡ್ ಗ್ರಾಮಾಂತರ – 9497942719
ವಯನಾಡ್ - 9497942712
ಕಣ್ಣೂರು ನಗರ – 9497942713
ಕಣ್ಣೂರು ಗ್ರಾಮಾಂತರ – 9497942720
ಕಾಸರಗೋಡು – 9497942714
ತಿರುವನಂತಪುರಂ ಶ್ರೇಣಿ – 9497942721
ಎರ್ನಾಕುಳಂ ಸರ್ಕಲ್ - 9497942722
ತ್ರಿಶೂರ್ ಸರ್ಕಲ್ - 9497942723
ಕಣ್ಣೂರು ಸರ್ಕಲ್– 9497942724