ನವದೆಹಲಿ: ಹಿಂದೂ ಮಹಾಸಾಗರದಲ್ಲಿನ ತಾಪಮಾನವು 2020ರಿಂದ 2100ರ ನಡುವೆ 1.4 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
ನವದೆಹಲಿ: ಹಿಂದೂ ಮಹಾಸಾಗರದಲ್ಲಿನ ತಾಪಮಾನವು 2020ರಿಂದ 2100ರ ನಡುವೆ 1.4 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದರಿಂದಾಗಿ ಶಾಶ್ವತ ಉಷ್ಣ ಅಲೆಯ ಪರಿಸ್ಥಿತಿ ಉಂಟಾಗಬಹುದು. ಅದರಿಂದ ಚಂಡಮಾರುತಗಳು ತೀವ್ರಗೊಂಡು, ಮುಂಗಾರಿನ ಮೇಲೆ ಪರಿಣಾಮ ಬೀರುತ್ತದೆ.
ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ (ಐಐಟಿಎಂ) ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಸಮುದ್ರದ ಶಾಖದ ಅಲೆಗಳು 1970-2000ದ ಅವಧಿಯಲ್ಲಿ ವರ್ಷಕ್ಕೆ 20 ದಿನಗಳಿದ್ದವು. ಅದು ವರ್ಷಕ್ಕೆ 220- 250 ದಿನಗಳವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, 21ನೇ ಶತಮಾನದ ಅಂತ್ಯದ ವೇಳೆಗೆ ಹಿಂದೂ ಮಹಾಸಾಗರದ ಜಲಾನಯನ ಪ್ರದೇಶವು ಶಾಶ್ವತ ಶಾಖದ ಅಲೆಯ ಸ್ಥಿತಿಗೆ ತಳ್ಳಬಹುದು ಎಂದು ಅಂದಾಜಿಸಲಾಗಿದೆ.
ಸಮುದ್ರದಲ್ಲಿ ಉಷ್ಣತೆ ಹೆಚ್ಚಿದರೆ ಅದು ಹವಳಗಳು, ಸಮುದ್ರದಾಳದಲ್ಲಿನ ಹುಲ್ಲು ಮತ್ತು ಜೀವರಾಶಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಮೀನುಗಾರಿಕೆ ವಲಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಿಂದೂ ಮಹಾಸಾರದಲ್ಲಿನ ತಾಪಮಾನ ಏರಿಕೆಯು ಮೇಲ್ಮೈಗೆ ಸೀಮಿತವಾಗಿಲ್ಲ. ಅದು ಸಾಗರದ 2,000 ಮೀಟರ್‌ಗಳಷ್ಟು ಆಳದವರೆಗೂ ಉಷ್ಣತೆಯನ್ನು ಏರಿಸುತ್ತಿದೆ ಎಂದು ಅಧ್ಯಯನ ಹೇಳಿದೆ.