ಬದಿಯಡ್ಕ: ಬದಿಯಡ್ಕ ಸನಿಹದ ಕನ್ನೆಪ್ಪಾಡಿ ಸರಳಿ ನಿವಾಸಿ, ಪ್ರಗತಿಪರ ಕೃಷಿಕ ದಿ. ಶ್ಯಾಮ ಭಟ್ ಅವರ ಪತ್ನಿ ಈಶ್ವರಿ(74)ಬುಧವಾರ ನಿಧನರಾದರು. ಅವರು ಪತ್ರಕರ್ತ ಶ್ಯಾಮ ಪ್ರಸಾದ್ ಸರಳಿ ಸಹಿತ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಶ್ಯಾಮ ಪ್ರಸಾದ ಸರಳಿ ಅವರು ಸ್ಟುಡಿಯೊ ಮಾಲಕರೂ, ವಿಜಯಕರ್ನಾಟಕ ಪತ್ರಿಕೆಯ ಬದಿಯಡ್ಕ ಪ್ರಾದೇಶಿಕ ವರದಿಗಾರರಾಗಿದ್ದು, ಎಕೆಪಿಯ ಸಂಘಟನೆಯ ನೇತಾರರೂ ಆಗಿರುವರು.