ನವದೆಹಲಿ: ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ಮೂವರು ಬಿಜೆಪಿ ಸದಸ್ಯರಿಗೆ ಗುರುವಾರ ಉಪರಾಷ್ಟ್ರಪತಿ ಜಗ್‌ದೀಪ್ ಧನಕರ್ ಪ್ರಮಾಣ ವಚನ ಬೋಧಿಸಿದರು.
ನೂತನ ಸಂಸತ್ ಭವನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.
ಛತ್ತೀಸ್‌ಗಢದ ದೇವೇಂದ್ರ ಪ್ರತಾಪ್ ಸಿಂಗ್, ಉತ್ತರಪ್ರದೇಶದ ತೇಜವೀರ್ ಸಿಂಗ್ ಮತ್ತು ಉತ್ತರಾಖಂಡದ ಮಹೇಂದ್ರ ಭಟ್ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.