ದುಬೈ: ಹೋರ್ಮುಜ್ ಜಲಸಂದಿಯಲ್ಲಿ ಹಡಗೊಂದರ ಮೇಲೆ ಕಮಾಂಡೊಗಳು ದಾಳಿ ನಡೆಸಿದ್ದು, ಇರಾನ್ ಈ ಕೃತ್ಯ ಎಸಗಿದೆ ಎಂದು ಮಧ್ಯಪ್ರಾಚ್ಯದ ರಕ್ಷಣಾ ಅಧಿಕಾರಿಗಳು ಆರೋಪಿಸಿದ್ದಾರೆ. ಇದರಿಂದ ತೆಹ್ರಾನ್ ಮತ್ತು ಪಶ್ಚಿಮದ ರಾಷ್ಟ್ರಗಳ ನಡುವಣ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಹೆಸರು ಬಹಿರಂಗ ಮಾಡಲು ಇಚ್ಛಿಸದ ರಕ್ಷಣಾ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಹೆಲಿಕಾಪ್ಟರ್ ಮೂಲಕ ಬಂದ ಕಮಾಂಡೊಗಳು ಹಗ್ಗದ ಸಹಾಯದಿಂದ ಕೆಳಗಿಳಿದು ಕಂಟೇನರ್‌ಗಳ ಮೇಲೆ ನಿಲ್ಲುವ ದೃಶ್ಯವಿದೆ.
ಹಡಗಿನಲ್ಲಿದ್ದ ಸಿಬ್ಬಂದಿಯೊಬ್ಬರು, 'ಹೊರಗೆ ಬರಬೇಡಿ' ಎಂದು ಕೂಗುತ್ತಿರುವ ಮತ್ತು ಹಡಗಿನ ಕೇಂದ್ರ ಭಾಗಕ್ಕೆ ತೆರಳುವಂತೆ ಸಹೋದ್ಯೋಗಿಗಳಿಗೆ ಹೇಳುತ್ತಿರುವ ದೃಶ್ಯವಿದೆ.
ವಿಡಿಯೊದಲ್ಲಿ ಕಾಣುವ ಹೆಲಿಕಾಪ್ಟರ್ ಇರಾನ್‌ನ ರೆವಲೂಷನರಿ ಗಾರ್ಡ್ಸ್ ಬಳಸುವ ಹೆಲಿಕಾಪ್ಟರ್‌ನಂತಿದೆ. ಈ ಹಿಂದೆ ಇರಾನ್ ಇಂಥ ಹೆಲಿಕಾಪ್ಟರ್ ಬಳಸಿ ಹಗಡುಗಳ ಮೇಲೆ ದಾಳಿ ನಡೆಸಿತ್ತು.
ಹಡಗು, ಎಂಎಸ್‌ಸಿ ಏರೀಸ್ ಅಥವಾ ಝೋಡಿಯಾಕ್ ಸಮೂಹಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ಆದರೆ, ಎರಡೂ ಸಂಸ್ಥೆಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಡಗನ್ನು ವಶಪಡಿಸಿಕೊಂಡ ಬಗ್ಗೆ ಅಥವಾ ಆರೋಪದ ಬಗ್ಗೆ ಇರಾನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಮಾಧ್ಯಮಗಳೂ ವರದಿ ಮಾಡಿಲ್ಲ.