ಪಾಲಕ್ಕಾಡ: ರೈಲೊಂದು ಡಿಕ್ಕಿಯಾಗಿ ಕಾಡಾನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿದೆ.
ಪಾಲಕ್ಕಾಡ: ರೈಲೊಂದು ಡಿಕ್ಕಿಯಾಗಿ ಕಾಡಾನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆನೆಗೆ ರೈಲು ಹಳಿ ಪಕ್ಕವೇ ಪಶು ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲಿಯೇ ಆಹಾರ ನೀಡಿದ್ದಾರೆ. ಆದರೂ ಆನೆ ಚೇತರಿಸಿಕೊಳ್ಳುತ್ತಿಲ್ಲ.
'ಆನೆಯ ಹಿಂಗಾಲುಗಳಿಗೆ ಗಂಭೀರ ಗಾಯಗಳಾಗಿವೆ. ಎದ್ದು ನಿಲ್ಲಲು ಆಗುತ್ತಿಲ್ಲ' ಎಂದು ತ್ರಿಶೂರ್ ವಲಯದ ಅರಣ್ಯ ಪಶುವೈಧ್ಯಾಧಿಕಾರಿ ಡಾ. ಡೇವಿಡ್ ಅಬ್ರಾಂ ತಿಳಿಸಿದ್ದಾರೆ.
ರೈಲು ಡಿಕ್ಕಿಯಾಗಿ ಆನೆ ಗಾಯಗೊಂಡಿದೆ. ಆದರೆ ಯಾವ ರೈಲು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪರಿಚಿತ ಲೋಕೊ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಆನೆ ಶೀಘ್ರ ಚೇತರಿಸಿಕೊಳ್ಳಲು ಆಗದಿದ್ದರೇ ಅದನ್ನು ವಳಯಾರ್ ಪಶು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.