ತಿರುವನಂತಪುರಂ: ಕೇರಳ ಮೂಲದ ದಂಪತಿ ಮತ್ತು ಅವರ ಸ್ನೇಹಿತ ಅರುಣಾಚಲದ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಯ ತನಿಖೆಗೆ ವಿಶೇಷ ತಂಡವನ್ನು ನೇಮಿಸಲಾಗಿದೆ.
ತಿರುವನಂತಪುರಂ ಕಂಟೋನ್ಮೆಂಟ್ ಎಸ್ಪಿ ನೇತೃತ್ವದ ಆರು ಸದಸ್ಯರ ತಂಡವು ತನಿಖೆಯ ಉಸ್ತುವಾರಿ ವಹಿಸಿದೆ. ಮೃತ ಮೂವರು ಮೂಢನಂಬಿಕೆಯ ದೈವ್ವ ಸೇವೆಗೆ ಹೇಗೆ ಆಕರ್ಷಿತರಾದರು ಎಂಬುದನ್ನು ತಂಡ ತನಿಖೆ ನಡೆಸಲಿದೆ. ನವೀನ್ ಮತ್ತು ದೇವಿ ಈ ಹಿಂದೆ ಅರುಣಾಚಲಕ್ಕೆ ಹೋಗಿದ್ದರು. ದೈವ್ವಗಳ ಆರಾಧನೆ ಮತ್ತು ಸಾವಿನ ಸ್ಥಳ, ಅರುಣಾಚಲ ಪ್ರದೇಶದ ಸಿರೋ ವ್ಯಾಲಿ ನಡುವಿನ ಸಂಬಂಧವನ್ನು ತನಿಖೆ ಮಾಡಲಾಗುತ್ತದೆ. ಮೂವರೂ ಮಾರ್ಚ್ 27 ರಂದು ಅರುಣಾಚಲಕ್ಕೆ ಹೋಗಿದ್ದರು. ಅರುಣಾಚಲದ ರಾಜಧಾನಿ ಇಟಾನಗರದಿಂದ 120 ಕಿ.ಮೀ ದೂರದಲ್ಲಿರುವ ಸಿರೋದಲ್ಲಿನ ಹೋಟೆಲ್‍ನಲ್ಲಿ ತಂಗಿದ್ದರು.
ಅವರ ಕೊಠಡಿಗಳಲ್ಲಿ ಪತ್ತೆಯಾದ ಲ್ಯಾಪ್‍ಟಾಪ್‍ಗಳು ಮತ್ತು ಮೊಬೈಲ್ ಪೋನ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮೃತ ನವೀನ್, ಆತನ ಪತ್ನಿ ದೇವಿ ಮತ್ತು ಆತನ ಸ್ನೇಹಿತೆ ಆರ್ಯ ನಡುವಿನ ಇ-ಮೇಲ್ ಸಂವಹನ ರಹಸ್ಯ ಭಾಷೆಯಲ್ಲಿತ್ತು(ಕೋಡ್ ವರ್ಡ್) ಎಂದು ಪೋಲೀಸರು ಪತ್ತೆ ಮಾಡಿದ್ದಾರೆ. ಪೋಲೀಸರು 2021 ರಿಂದ ಅವರ ಇ-ಮೇಲ್‍ಗಳನ್ನು ಪರಿಶೀಲಿಸುತ್ತಿದ್ದಾರೆ. ಮರಣಾನಂತರದ ಜೀವನ ಮತ್ತು ಮೂಢನಂಬಿಕೆಗಳ ಬಗ್ಗೆ ಚರ್ಚೆಗಳ ಡಿಜಿಟಲ್ ಪುರಾವೆಗಳು ಲಭ್ಯವಾಗಿವೆ. ಡಾನ್ ಬಾಸ್ಕೋ ಹೆಸರಿನ ಐಡಿಯಿಂದ ಸಂದೇಶಗಳು ಬಂದಿವೆ. ಇದು ನಕಲಿ ಇ-ಮೇಲ್ ಐಡಿ ಎಂದು ಪೋಲೀಸರು ಪತ್ತೆ ಮಾಡಿದ್ದಾರೆ. ಆರ್ಯ, ದೇವಿ ಮತ್ತು ನವೀನ್ ಅವರ ಇಮೇಲ್ ಚಾಟ್‍ಗಳನ್ನು ಸಹ ಪೋಲೀಸರು ಪತ್ತೆ ಮಾಡಿದ್ದಾರೆ. ಚಾಟ್‍ನ ವಿಷಯವನ್ನು ಬಿಡುಗಡೆ ಮಾಡಲಾಗಿಲ್ಲ. ಅದು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ತೀರ್ಮಾನಿಸಲಾಗಿದೆ. ನಾಲ್ಕು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು. ಅರುಣಾಚಲದ ಸಿರೋದಲ್ಲಿ ಸೈತಾನ ಸೇವಕರ ಸಮಾವೇಶ ನಡೆದಿದ್ದು, ಅದರಲ್ಲಿ ಆರ್ಯ, ದೇವಿ ಮತ್ತು ನವೀನ್ ಭಾಗವಹಿಸಿರುವ ಸೂಚನೆಗಳಿವೆ. ಇದರ ಮುಂದುವರಿಕೆಯೇ ಈಸ್ಟರ್ ದಿನದಂದು ಆತ್ಮಹತ್ಯೆಗೆ ಕಾರಣವಾಯಿತು ಎಂಬ ತೀರ್ಮಾನಕ್ಕೆ ಈಗ ಬರಲಾಗಿದೆ.
ಅರುಣಾಚಲ ಪ್ರದೇಶ ಮತ್ತು ಲೋವರ್ ಸುಬಾನ್ಸಿರಿ ಎಸ್ಪಿ. ಕೆನ್ನಿ ಬಾಗ್ರಾ ನೇತೃತ್ವದ ಐದು ಸದಸ್ಯರ ತಂಡವು ನಿಗೂಢ ಸಾವುಗಳು ಮತ್ತು ಬ್ಲ್ಯಾಕ್‍ಮ್ಯಾಜಿಕ್ ಗ್ಯಾಂಗ್‍ಗಳನ್ನು ತನಿಖೆ ಮಾಡುತ್ತಿವೆ.