ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಪೂರ್ವ ಘಟಕ ಸಮಿತಿಯ ನೇತೃತ್ವದಲ್ಲಿ ಘಟಕದ ಎಲ್ಲಾ ಸದಸ್ಯರಿಗೆ ವಿಷು ಹಬ್ಬದ ಅಂಗವಾಗಿ ಕೊಡುಗೆ ನೀಡಲಾಯಿತು.
ಕಾಸರಗೋಡು ಪ್ರಾದೇಶಿಕ ಕಛೇರಿಯಲ್ಲಿ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ನಿರ್ದೇಶಾನುಸಾರ ಮಾಜಿ ರಾಜ್ಯ ಪದಾಧಿಕಾರಿ ಹಾಗೂ ಘಟಕದ ಹಿರಿಯ ಸದಸ್ಯ ಗೋವಿಂದನ್ ಶಂಕರನಕಾಡ್ ಮಹಿಳಾ ಘಟಕದ ಪ್ರಿಯಾಂಕ್, ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ಜಿಲ್ಲಾ ಜತೆ ಕಾರ್ಯದರ್ಶಿ ರಾಜೇಂದ್ರನ್, ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ವಾಮನ್ ಕುಮಾರ್, ಘಟಕದ ಉಪಾಧ್ಯಕ್ಷೆ ಶಬರಿ, ಜತೆ ಕಾರ್ಯದರ್ಶಿ ಸುನೀಲ್, ನಿರ್ಮಲಾಕ್ಷನ್ ಉಪಸ್ಥಿತರಿದ್ದರು.