ಗಢಚಿರೌಲಿ: ಮಹಾರಾಷ್ಟ್ರ-ಛತ್ತೀಸಗಢದ ಗಡಿಯಲ್ಲಿನ ನಕ್ಸಲರ ಶಿಬಿರವನ್ನು ಭೇದಿಸಿರುವ ಗಢಚಿರೌಲಿ ಪೊಲೀಸರು ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪ್ರಕಟಣೆ ತಿಳಿಸಿದೆ.
ಗಢಚಿರೌಲಿ: ಮಹಾರಾಷ್ಟ್ರ-ಛತ್ತೀಸಗಢದ ಗಡಿಯಲ್ಲಿನ ನಕ್ಸಲರ ಶಿಬಿರವನ್ನು ಭೇದಿಸಿರುವ ಗಢಚಿರೌಲಿ ಪೊಲೀಸರು ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪ್ರಕಟಣೆ ತಿಳಿಸಿದೆ.
ಚ್ಯುಟಿನ್‌ಟೋಲಾ ಗ್ರಾಮದಲ್ಲಿ ಕೆಲವು ನಕ್ಸಲರು ಬಿಡಾರ ಹೂಡಿದ್ದಾರೆ ಎಂದು ಪೊಲೀಸರಿಗೆ ಶುಕ್ರವಾರ ರಾತ್ರಿಯೇ ಬೇಹುಗಾರಿಕಾ ಸಂಸ್ಥೆಯಿಂದ ಮಾಹಿತಿ ಸಿಕ್ಕಿತ್ತು.
ನಕ್ಸಲ್ ವಿರೋಧಿ ಕಾರ್ಯಾಚರಣೆ ಪಡೆ ಹಾಗೂ ಸಿ-60 ತಂಡಗಳು ಶನಿವಾರ ಮುಂಜಾನೆ 450 ಮೀಟರ್ ಎತ್ತರದ ಬೆಟ್ಟದ ಮೇಲಿನ ಶಿಬಿರದ ಮೇಲೆ ದಾಳಿ ನಡೆಸಿದವು. ನಕ್ಸಲರು ಅಷ್ಟರಲ್ಲಿ ಪರಾರಿಯಾಗಿದ್ದರು. ಸ್ಫೋಟಕಗಳಲ್ಲದೆ ವೈರ್‌ಗಳು, ಬ್ಯಾಟರಿಗಳು, ವಾಕಿ-ಟಾಕಿ ಚಾರ್ಜರ್‌ಗಳು, ಬ್ಯಾಕ್‌ಪ್ಯಾಕ್‌ಗಳು ಹಾಗೂ ನಕ್ಸಲ್ ಬರಹಗಳಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಛತ್ತೀಸಗಢ ಗಡಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿಯೂ ತಿಳಿಸಿದ್ದಾರೆ.