ಬದಿಯಡ್ಕ: ವಾರ್ಷಿಕ ವಸಿಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಕಿಳಿಂಗಾರು ನೆಡುಮನೆಯಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅವರಿಗೆ ವಸಿಷ್ಠ ಪೀಠ ಪ್ರಶಸ್ತಿ ಮತ್ತು ಜ್ಯೋತಿಷಿ ವಳಕುಂಜ ಮುರಳೀಕೃಷ್ಣ ಶರ್ಮ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಜ್ಯೋತಿಷಿ ವಳಕುಂಜ ವೆಂಕಟ್ರಮಣ ಭಟ್ ಅವರಿಗೆ ಗೌರವಾರ್ಪಣೆ ನಡೆಯಿತು. ಮಾನವಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು. ಗೋಪಾಲಕೃಷ್ಣ ಭಟ್ ಮೂಲಡ್ಕ ಮತ್ತು ಶಿವಪ್ರಸಾದ ಭಟ್ ಪೆರಡಾಲ ಅಭಿನಂದನೆ ಪತ್ರ ವಾಚಿಸಿದರು. ಆದಿಚುಂಚನಗಿರಿಯ ವಿದ್ವಾನ್ ಗೋವಿಂದ ಭಟ್ ಉಪಸ್ಥಿತರಿದ್ದರು.
ಅಧಿಕಾರಿ ಕೃಷ್ಣಯ್ಯ ಪುತ್ತಿಗೆ ಅವರು ಕೊಡಮಾಡುವ ಆರೋಗ್ಯ ನಿಧಿ ಮತ್ತು ಪಳ್ಳತ್ತಡ್ಕ ಕೇಶವಭಟ್ ಅವರ ಸ್ಮರಣಾರ್ಥ ನೀಡುವ ಆರ್ಥಿಕ ಸಹಾಯ ವಿತರಿಸಲಾಯಿತು. ಕಿಳಿಂಗಾರು ಗೋಪಾಲಕೃಷ್ಣ ಭಟ್ ಸ್ವಾಗತಿಸಿ,ಸಾಯಿರಾಂ ಶ್ರೀಕೃಷ್ಣ ಭಟ್ ವಂದಿಸಿದರು. ಕಲಾವಿದ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು.