ಕೊಚ್ಚಿ: ಮಂಜುಮ್ಮಲ್ ಬಾಯ್ಸ್ ಚಿತ್ರ ನಿರ್ಮಾಪಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಎರ್ನಾಕುಳಂ ಸಬ್ ಕೋರ್ಟ್ ಆದೇಶ ನೀಡಿದೆ.
ಸಬ್ ಕೋರ್ಟ್ ನ್ಯಾಯಾಧೀಶ ಸುನಿಲ್ ವರ್ಕಿ ಅವರು ಚಿತ್ರದ ನಿರ್ಮಾಣ ಸಂಸ್ಥೆಯಾದ ಪರವ ಫಿಲಂಸ್ ಮತ್ತು ಅದರ ಪಾಲುದಾರ ಶಾನ್ ಆಂಟೋನಿ ಅವರ 40 ಕೋಟಿ ರೂಪಾಯಿಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.
ಆರೂರು ಮೂಲದ ಸಿರಾಜ್ ವಲಿಯತ್ತರ ಹಮೀದ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಚಿತ್ರ ನಿರ್ಮಾಣಕ್ಕೆ 7 ಕೋಟಿ ರೂ.ಅವರು ಹೂಡಿಕೆ ಮಾಡಿದ್ದರು. ಯಾವುದೇ ಲಾಭದ ಪಾಲು ಅಥವಾ ಹೂಡಿಕೆಯನ್ನು ನೀಡದೆ 40% ಲಾಭದ ಪಾಲು ಭರವಸೆ ನೀಡಿ ನಿರ್ಮಾಪಕರು ಹಣವನ್ನು ಪಡೆದ ನಂತರ ವಂಚಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅರ್ಜಿಯ ಪ್ರಕಾರ, ಚಿತ್ರವು ಇದುವರೆಗೆ ಜಾಗತಿಕವಾಗಿ ಇನ್ನೂರ ಇಪ್ಪತ್ತು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಮತ್ತು ಚಿತ್ರವು ಒಟಿಟಿ ವೇದಿಕೆಗಳ ಮೂಲಕ ಸುಮಾರು ಇಪ್ಪತ್ತು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ನಿರ್ಮಾಪಕರು ಯಾವುದೇ ಹಣವನ್ನು ಖರ್ಚು ಮಾಡಿಲ್ಲ ಮತ್ತು 23 ಕೋಟಿ ರೂ.ಖರ್ಚು ಬರಲಿದೆ ಎಂದೂ ಈ ಪೈಕಿ ಏಳು ಕೋಟಿ ಪಡೆದಿದ್ದರೆಂದೂ ಹೇಳಲಾಗಿಒದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಚಿತ್ರದ ನಿರ್ಮಾಪಕರಾದ ಸೌಬಿನ್ ಶಾಹಿರ್ ಮತ್ತು ಬಾಬು ಶಾಹಿರ್ ಅವರಿಗೆ ನೋಟಿಸ್ ಕಳುಹಿಸಿದೆ. ಅರ್ಜಿದಾರರ ಪರ ವಕೀಲ ಸೈಬಿ ಜೋಸ್ ಕಿಟಂಗೂರ್ ವಾದ ಮಂಡಿಸಿದ್ದರು.