ಕಾಸರಗೋಡು: ಬಹುಮುಖ ಅರಳು ಪ್ರತಿಭೆ ರಾಜ್ಯಮಟ್ಟದ ಶಾಲಾಕಲೋತ್ಸವದಲ್ಲಿ ಎ ಗ್ರೇಡ್ ವಿಜೇತೆ, ಉದಯೋನ್ಮುಖ ನೃತ್ಯಗಾತಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಕೂಡ್ಲು ಇವಳಿಗೆ ಕಾಸರಗೋಡಿನ ಪ್ರತಿಷ್ಠಿತ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇವರು ರಂಗಚಿನ್ನಾರಿ ಯುವ ಪ್ರಶಸ್ತಿನೀಡಿ ಗೌರವಿಸಿತು. ಪದ್ಮಗಿರಿ ಕಲಾ ಕುಠೀರದಲ್ಲಿ ಜರಗಿದ ರಂಗಚಿನ್ನಾರಿಯ ಹದಿನೆಂಟನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಡನೀರು ಮಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಶಾಲುಹೊದಿಸಿ ಫಲ ಮಂತ್ರಾಕ್ಷತೆನೀಡಿ ಅನುಗ್ರಹಿಸಿದರು.
ಸಮಾರಂಭದಲ್ಲಿ ಅಧ್ಯಕ್ಷರಾದ ಧಾರ್ಮಿಕ ಮುಂದಾಳು ಡಾ ಅನಂತಕಾಮತ್, ಅತಿಥಿಗಳಾದ ಕಾನತ್ತೂರ್ ನಾಲ್ವರ್ ದೈವಸ್ಥಾನದ ಮೊಕ್ತೇಸರರಾದ ಕೆ ಪಿ ಶಶಿಧರನ್ ನಾಯರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸಂಕಬೈಲು ಸತೀಶ ಅಡಪ ಸಂಕಬೈಲು, ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನ ಹಾರಾರ್ಪಣೆ, ಪೇಟ, ಸ್ಮರಣಿಕೆ, ರಂಗಚಿನ್ನಾರಿ ಯುವಪ್ರಶಸ್ತಿ ಸನ್ಮಾನ ಪತ್ರ, ಫಲಪುಷ್ಪ ನಗದು ನೀಡಿ ಗೌರವಿಸಿದರು. ರತ್ನಾಕರ ಓಡಂಗಲ್ಲು ಸನ್ಮಾನ ಪತ್ರ ವಾಚಿಸಿದರು, ಕುಮಾರಿ ಮೇಧಾ ಕಾಮತ್ ಸನ್ಮಾನ ಸಂದರ್ಭದಲ್ಲಿ ಭಾವಗೀತೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನ ಸ್ವಾಗತಿಸಿ ವಂದಿಸಿದರು, ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು,