ಕಾಸರಗೋಡು: ಕೇರಳದ ಶಿಕ್ಷಣ ವಲಯದಲ್ಲಿ ತಿದ್ದುಪಡಿ ನಡೆಸುವ ಶಕ್ತಿಯಾಗಿ ದೇಶೀಯ ಅಧ್ಯಾಪಕ ಪರಿಷತ್(ಎನ್‍ಟಿಯು)ಇಂದು ಬೆಳೆದು ನಿಂತಿರುವುದಾಗಿ ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಗೋಪ ಕುಮಾರ್ ತಿಳಿಸಿದ್ದಾರೆ.
ಅವರು ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಕೂಡ್ಲು ಸನಿಹ ನಿರ್ಮಿಸಲಾದ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತಮಾಡಿದರು. ಶಿಕ್ಷಣ ವಲಯದ ಇಂದಿನ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪಗಳಿಂದ ಸಾಮಾಜಿಕ ಅಸಮತೋಲನ ಹೆಚ್ಚಾಗಲು ಕಾರಣವಾಗಿದೆ. ಕೇರಳದ ಅರ್ಥಿಕ ಪರಿಸ್ಥಿತಿ ದಿನಕಳೆದಂತೆ ಜಟಿಲಗೊಳ್ಳುತ್ತಿದೆ. ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ವಲಯಗಳಲ್ಲಿ ವೆತನ ನೀಡಲೂ ಹಣವಿಲ್ಲದ ಪರಿಸ್ಥಿತಿಯಿದೆ ಎಂದು ತಿಳಿಸಿದರು.
ಈ ಸಂದಬ್ ನಡೆದ ಶಿಕ್ಷಕರ ಬೀಳ್ಕೊಡುಗೆ ಸಮಾರಂಭವನ್ನು ಆರೆಸ್ಸೆಸ್ ಕುಟುಂಬ ಪ್ರಬೋಧನ್ ಕರ್ನಾಟಕ ಪ್ರಾಂತೀಯ ಸಹಸಂಚಾಲಕ್ ಎನ್,ಪಿ ಸುಬ್ರಾಯ ಉದ್ಘಾಟಿಸಿದರು. ಜ್ಞಾನಪ್ರದೀಪ ಸಾಂಸ್ಕøತಿಕ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಿ. ಭಾಸ್ಕರ, ಎನ್‍ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ಸತೀಶ್ ಕುಮಾರ್ ಶೆಟ್ಟಿ, ಮಹಿಳಾ ವಿಂಗ್ ಜತೆಕಾರ್ಯದರ್ಶಿಸುಚಿತಾ, ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಅಜಿತ್‍ಕುಮಾರ್ ಸ್ವಾಗತಿಸಿದರು. ಉಪಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ ಪ್ರದೀಪ ಕುಮಾರ್ ವಂದಿಸಿದರು.