ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕುಂಜತ್ತೂರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಟುವಟಿಕೆ ನಡೆಸುತ್ತಿರುವ ರಾಜ್ಯದ ಒಂದನೇ ಸಂಖ್ಯೆ ಮತಗಟ್ಟೆಯಲ್ಲಿ ಇಬ್ಬರು ಹೊಸ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಸಂತಸ ಹಂಚಿಕೊಂಡರು. ಮಂಜೇಶ್ವರ ಗೋವಿಂದಪೈ ಸ್ಮಾರಕ ಕಾಲೇಜಿನ ಪದವಿ ವಿದ್ಯಾರ್ಥಿ ಅಬ್ದುಲ್ ರಾಯಸ್ ಹಾಗೂ ಕುಂಚತ್ತೂರಿನ ನಾಜಿಯಾ ರಾಜ್ಯದ ಮೊದಲ ಬೂತ್‍ನಲ್ಲಿ ಚೊಚ್ಚಲ ಮತದಾನ ನಡೆಸಿದ್ದಾರೆ.