ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಭಾನುವಾರ ಆರಂಭವಾಗಿದ್ದು ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಿಂದ ಬೆಳಗ್ಗೆ ಹಸಿರುವಾಣಿ ಮೆರವಣಿಗೆ ಜರಗಿತು. ಭಜನಾ ಮಂದಿರದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ದೇವರಮೆಟ್ಟು, ಕುಂಟಿಕಾನ ದಾರಿಯಾಗಿ ಶ್ರೀಕ್ಷೇತ್ರಕ್ಕೆ ತಲುಪಿದ ಮೆರವಣಿಗೆಯನ್ನು ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಕಲ್ಲಂಗಡಿ ಹಣ್ಣು ವಿತರಿಸಿದರು. ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ. ಪ್ರಾರ್ಥನೆಯನ್ನು ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಪೆರ್ಣೆ, ಪ್ರಧಾನ ಕಾರ್ಯದರ್ಶಿ ಶ್ಯಾಮ ಭÀಟ್ ಕೆ.ಎಂ., ಫಿಟ್ ಪರ್ಸನ್ ಹಾಗೂ ಕೋಶಾಧಿಕಾರಿ ರಮಾನಾಥ ಶೆಟ್ಟಿ, ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಬಿ.ಕುಳಮರ್ವ, ಸಮಿತಿಯ ಪದಾಧಿಕಾರಿಗಳು, ಭÀಗವದ್ಭಕ್ತರು ಈ ಸಂದರ್ಭದಲ್ಲಿ ಜೊತೆಗಿದ್ದರು. ಇದೇ ಸಂದಭರ್ದಲ್ಲಿ ಉಗ್ರಾಣಮುಹೂರ್ತ ನೆರವೇರಿಸಲಾಯಿತು.
ಇಂದು ನಡೆಯುವ ಕಾರ್ಯಕ್ರಮಗಳು :
ಪ್ರಾತಃಕಾಲ ಗಣಪತಿ ಹೋಮ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಹೋಮ ಕಲಶಾಭಿಷೇಕ, ಅಂಕುರಪೂಜೆ, ಮಹಾಪೂಜೆ ನಡೆಯಲಿದೆ. ಬೆಳಗ್ಗಿನಿಂದ ಸಂಜೆ ತನಕ ವಿವಿಧ ಭÀಜನಾ ಸಂಘಗಳಿಂದ ಭಜನೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ 10 ಕ್ಕೆ ವಿದುಷಿ ಸರಸ್ವತಿ ಕೃಷ್ಣನ್ ಮತ್ತು ಬಳಗ ಸಾರಂಗ ಸಂಗೀತ ಶಾಲೆ ಕುಮಾರಮಂಗಲ ಬೇಳ ಇವರಿಂದ ಸಂಗೀತ ಕಚೇರಿ, ಅಪರಾಹ್ನ 2ರಿಂದ ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ ವಾಮನ ಚರಿತ್ರೆ, ಸಂಜೆ 7ರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 23 (ನಾಳೆ) ಕಾರ್ಯಕ್ರಮಗಳು :
ಪ್ರಾತಃಕಾಲ ಗಣಪತಿಹೋಮ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಭಜನಾಸಂಘಗಳಿಂದ ಭಜನೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಕೀರ್ತನ ಕುಟೀರ ಕುಂಬಳೆ ಇವರಿಂದ ಹರಿಕಥೆ, 11.30 ಶಿಲ್ಪಾಪರಮೇಶ್ವರಿ, ಕು ಚಿನ್ಮಯಿ ಹಾಗೂ ಚಿರಾಗ್ ಕೃಷ್ಣ ವಾಶೆಮನೆ ಇವರಿಂದ ಸಂಗೀತ ಕಾರ್ಯಕ್ರಮ, ಅಪರಾಹ್ನ 2ರಿಂದ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಯಕ್ಷಗಾನ ತಾಳಮದ್ದಳೆ ದಕ್ಷಾಧ್ವರ, ಸಂಜೆ 7ರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.