ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಕೇರಳೀಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ತಿರುವನಂತಪುರದ ವಟ್ಟಿಯೂರ್ಕಾವ್‍ನ ಆರ್ಯ ಮತ್ತು ಕೊಟ್ಟಾಯಂ ಮೀನಾದಂ ನಿವಾಸಿ ನವೀನ್ ಮತ್ತು ದೇವಿ ಎಂದು ಗುರುತಿಸಲಾಗಿದೆ.
ದಂಪತಿ ಮತ್ತು ಮಹಿಳೆ ಇಟಾನಗರದ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 26ರಿಂದ ಆರ್ಯ ನಾಪತ್ತೆಯಾಗಿರುವಳೆಂದು ತಂದೆ ದೂರು ನೀಡಿದ್ದರು.
ಆರ್ಯ ನಾಲಂಚಿರ ಶಾಲೆಯ ಶಿಕ್ಷಕಿ. ಆರ್ಯ ತನ್ನ ಸ್ನೇಹಿತರಾದ ದೇವಿ ಮತ್ತು ನವೀನ್ ಜೊತೆ ಗುವಾಹಟಿಗೆ ಹೋಗಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ನಂತರ, ಆರ್ಯ ತಂದೆ ನೀಡಿದ ದೂರಿನ ಆಧಾರದ ಮೇಲೆ, ಪೋಲೀಸರು ಅರುಣಾಚಲ ಪ್ರದೇಶದ ಕೆಲವು ಭಾಗಗಳಿಗೆ ಮಾಹಿತಿಯನ್ನು ರವಾನಿಸಿದರು. ನಂತರ ಅರುಣಾಚಲ ಪ್ರದೇಶ ಪೋಲೀಸರು ಮಹಿಳೆ ಮತ್ತು ಆಕೆಯ ಸ್ನೇಹಿತರು ಹೋಟೆಲ್ ಕೋಣೆಯಲ್ಲಿ ಶವವಾಗಿರುವುದನನು ಪತ್ತೆಮಾಡಿದರು.
ಆತ್ಮಹತ್ಯೆ ಎಂಬುದು ಪ್ರಾಥಮಿಕ ತೀರ್ಮಾನ. ಇತರ ಹಂತಗಳ ನಂತರ ಮೃತದೇಹವನ್ನು ಕೇರಳ ಪೋಲೀಸರಿಗೆ ಹಸ್ತಾಂತರಿಸಲಾಗುವುದು. ಆರ್ಯ ಮತ್ತು ಆಕೆಯ ಸ್ನೇಹಿತರು ಏಕೆ ಅರುಣಾಚಲಕ್ಕೆ ತೆರಳಿದ್ದರು ಎಂಬಿತ್ಯಾದಿ ಘಟನೆಗಳ ಕುರಿತು ತನಿಖೆ ನಡೆಸಬೇಕಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಿವರವಾದ ತನಿಖೆ ನಡೆಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಿಗೂಢತೆ ಇದ್ದು, ಮೈಮೇಲೆ ನಾನಾ ರೀತಿಯ ಗಾಯಗಳಾಗಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಸ್ಟ್ರಲ್ ಪೆÇ್ರಜೆಕ್ಷನ್ ಬಗ್ಗೆ ಪೋಲೀಸರಿಗೆ ಅನುಮಾನವಿದೆ.
ತಿರುವನಂತಪುರಂ: ಅರುಣಾಚಲದಲ್ಲಿ ದಂಪತಿಯ ಸಾವಿನಲ್ಲಿ ಹಲವು ನಿಗೂಢತೆಗಳಿವೆ. ಅವರು ಶವವಾಗಿ ಪತ್ತೆಯಾಗಿರುವ ಕೊಠಡಿಯಿಂದ ಆತ್ಮಹತ್ಯೆ ಪತ್ರ ಸಿಕ್ಕಿದೆ ಎಂದು ಅರುಣಾಚಲ ಪೋಲೀಸರು ತಿಳಿಸಿದ್ದಾರೆ.
‘ಸಾಲವಿಲ್ಲ, ನಮಗೆ ತೊಂದರೆ ಇಲ್ಲ, ನಾವು ಎಲ್ಲಿದ್ದೇವೋ ಅಲ್ಲಿಗೆ ಹೋಗುತ್ತೇವೆ’ ಎಂದು ಆ ಚೀಟಿಯಲ್ಲಿ ಬರೆಯಲಾಗಿದೆ. ಸಾಯುವ ಮುನ್ನವೇ ಮರಣ ಹೊಂದಿದ ನವೀನ್, ಸಾವಿನ ನಂತರದ ಜೀವನ ಮತ್ತು ಪುನರ್ಜನ್ಮದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದ್ದಾರೆ ಎಂದು ಸಹ ಸೂಚಿಸಲಾಗಿದೆ. ಕೊಠಡಿಯಿಂದ ದಂಪತಿಯ ವಿವಾಹ ಪ್ರಮಾಣಪತ್ರವನ್ನೂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಮೂವರೂ ಮಣಿಕಟ್ಟುಗಳನ್ನು ಕತ್ತರಿಸಿರುವುದು ಪತ್ತೆಯಾಗಿದೆ. ದೇಹದಾದ್ಯಂತ ಗಾಯಗಳು ಕಂಡುಬಂದಿವೆ.
ನವೀನ್‍ನ ಇಂಟರ್‍ನೆಟ್ ಸರ್ಚ್ ಹಿಸ್ಟರಿಯೇ ದಂಪತಿಯ ಸಾವಿಗೆ ಮಾಟಮಂತ್ರದ ಕೈವಾಡವಿದೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಇದು ಸಾವಿನ ನಂತರದ ಜೀವನದ ಬಗ್ಗೆ ಅವರ ಚಟುವಟಿಕೆ ಸೂಚಿಸುತ್ತದೆ. ಮೃತದೇಹದ ಮೇಲೆ ನಿರ್ದಿಷ್ಟ ರೀತಿಯ ಗಾಯಗಳು ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದಂಪತಿಗಳು ಬ್ಲ್ಯಾಕ್ ಮ್ಯಾಜಿಕ್, ಪುನರ್ಜನ್ಮ ಸಮುದಾಯಕ್ಕೆ ಸೇರಿದವರು ಎಂದು ನೆರೆಹೊರೆಯವರು ಹೇಳುತ್ತಾರೆ.
ಮಾಟ-ಮಂತ್ರದಂತಹ ಮೂಢನಂಬಿಕೆಗಳಿಂದ ಜನರು ಪ್ರಾಣ ಕಳೆದುಕೊಳ್ಳುವ ಕಥೆಗಳು ಪ್ರಪಂಚದಾದ್ಯಂತ ಇವೆ.ಇಂತಹ ಗುಂಪುಗಳಲ್ಲಿ ತಲೆ ಕಡಿಯುವುದರಿಂದ ಹಿಡಿದು ಆತ್ಮ ತ್ಯಾಗದವರೆಗೆ ಹಲವಾರು ರೀತಿಯ ವಿಚಿತ್ರ ಆಚರಣೆಗಳಿವೆ. ಅಂತಹ ಸಂಸ್ಥೆಗಳು ಸದಸ್ಯರ ಸಂಪೂರ್ಣ ಚಿಂತನೆಯ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಕೆಲಸ ಮಾಡುತ್ತವೆ ಮತ್ತು ಅವುಗಳಿನ್ನೂ ನಮ್ಮೊಳಗೆ ಗೂಢವಾಗಿ ಮನೆಮಾಡಿವೆ ಎಂಬುದೇ ವಿಶೇಷ.