HEALTH TIPS

ಕೇಸರಿ ಬಣ್ಣಕ್ಕೆ ಬದಲಾದ ಡಿಡಿ ನ್ಯೂಸ್ ಲೋಗೊ

ನವದೆಹಲಿ :ಪ್ರಸಾರ ಭಾರತಿ ಅಧೀನದ ರಾಷ್ಟ್ರೀಯ ಸುದ್ದಿವಾಹಿನಿ ಡಿಡಿ ನ್ಯೂಸ್‌ನ ಲೋಗೊ ಅಥವಾ ಲಾಂಛನದ ಬಣ್ಣವನ್ನು ಕೇಸರಿಗೆ ಬದಲಿಸಲಾಗಿದೆ. ದೇಶಾದ್ಯಂತ ಜನರಿಗೆ ಚಿರಪರಿಚಿತವಾಗಿದ್ದ ಕೆಂಪು ಬಣ್ಣದ ಲಾಂಛನಕ್ಕೆ ಬದಲಾಗಿ ಈ ಹೊಸ ಲಾಂಛನವು ಬಂದಿದೆ. ಜೊತೆಯಲ್ಲಿ ಹಿಂದಿಯಲ್ಲಿ 'ನ್ಯೂಸ್' ಪದವನ್ನೂ ಕೇಸರೀಕರಿಸಲಾಗಿದೆ.

ಅತ್ಯಾಧುನಿಕ ಸ್ಟುಡಿಯೋ ವ್ಯವಸ್ಥೆ ಮತ್ತು ನವೀಕರಿಸಿದ ವೆಬ್‌ಸೈಟ್ ಜೊತೆಗೆ ಲಾಂಛನದ ಬಣ್ಣವನ್ನು ಬದಲಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯು ತಿಳಿಸಿದೆ.

'ಮೌಲ್ಯಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಆದರೆ ನೀವು ನಮ್ಮನ್ನು ಹೊಸರೂಪದಲ್ಲಿ ನೋಡುತ್ತೀರಿ. ಹಿಂದೆಂದೂ ಕಂಡಿರದ ಸುದ್ದಿ ಪಯಣಕ್ಕೆ ಸಿದ್ಧರಾಗಿ 'ಎಂದು ಬದಲಾವಣೆಗಳನ್ನು ಪ್ರಕಟಿಸಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಲಾಗಿದೆ. ಡಿಡಿ ನ್ಯೂಸ್‌ನ ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ಯುಟ್ಯೂಬ್ ಚಾನೆಲ್‌ನ್ನು ಸಹ ಬದಲಿಸಲಾಗಿದೆ.

ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗಿರುವಾಗ ಬಿಜೆಪಿ ಧ್ವಜಕ್ಕೆ ಹೋಲುವಂತೆ ಬಣ್ಣದ ಬದಲಾವಣೆಯು ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಪಥ್ಯವಾಗಿಲ್ಲ. ಈ ಹಿಂದೆ ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ'ಯ ಪ್ರಸಾರಕ್ಕಾಗಿ ದೂರದರ್ಶನವು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು.

ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂದರ್ಶನವನ್ನೂ ಪ್ರಸಾರ ಮಾಡಲು ಡಿಡಿ ನ್ಯೂಸ್ ಉದ್ದೇಶಿಸಿತ್ತು. ಆದರೆ ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂಬ ಕಾರಣದಿಂದಾಗಿ ಅಗತ್ಯ ಅನುಮತಿಯನ್ನು ಪಡೆದುಕೊಳ್ಳಲು ಪ್ರಸಾರ ಭಾರತಿಗೆ ಸಾಧ್ಯವಾಗಿರಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries