ರಾಂಚಿ: ರಾಂಚಿಯಲ್ಲಿ ಭಾನುವಾರ ನಡೆದ 'ಇಂಡಿಯಾ' ಮೈತ್ರಿಕೂಟದ ರ್‍ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕುರ್ಚಿಗಳನ್ನು ಎಸೆದು ಜಗಳ ಮಾಡಿದ್ದಾರೆ. ಕಾರ್ಯಕರ್ತರೊಬ್ಬರ ತಲೆಗೆ ಗಾಯವಾಗಿದ್ದು, ರಕ್ತ ಸುರಿದಿದೆ.

ಚತ್ರಾ ಲೋಕಸಭಾ ಕ್ಷೇತ್ರದಿಂದ ಕೆ.ಎನ್.ತ್ರಿಪಾಠಿ ಅವರ ಉಮೇದುವಾರಿಕೆಗೆ ಸಂಬಂಧಿಸಿದಂತೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷಗಳ ಕಾರ್ಯಕರ್ತರ ಘರ್ಷಣೆಯನ್ನು ಟೀಕಿಸಿರುವ ಬಿಜೆಪಿ, ಇದು 'ಜಂಗಲ್ ರಾಜ್'ನ ಪ್ರದರ್ಶನ ಎಂದು ಜರಿದಿದೆ.
'ಇದು ಎಂಥ ಮೈತ್ರಿ?: ರಾಂಚಿಯ ರ್‍ಯಾಲಿಯಲ್ಲಿ ಅವರ ಪಕ್ಷಗಳ ಕಾರ್ಯಕರ್ತರು ಒಬ್ಬರ ಮೇಲೊಬ್ಬರಂತೆ ಕುರ್ಚಿ, ಟೇಬಲ್, ಸ್ಟೂಲ್‌ಗಳನ್ನು ಎಸೆದಾಡಿದ್ದಾರೆ. ಅಲ್ಲದೆ ಪರಸ್ಪರರ ತಲೆ ಒಡೆಯುತ್ತಿದ್ದಾರೆ. ಒಂದು ವೇಳೆ ಅವರು ತಪ್ಪಾಗಿ ಅಧಿಕಾರಕ್ಕೆ ಬಂದರೆ ಏನು ಗತಿ? ರ್‍ಯಾಲಿ ಜಾಗದಲ್ಲಿಯೇ ಈ ಜಂಗಲ್ ರಾಜ್‌ನ ಪ್ರದರ್ಶನವಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯಿಸಿದ್ದಾರೆ.
ಇವು ಜಂಗಲ್ ರಾಜ್ ಮತ್ತು ಭ್ರಷ್ಟಾಚಾರದ ಪಕ್ಷಗಳು. ಆದ್ದರಿಂದ ಮತದಾರರು ಬಹಳ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಅವರು ಕೋರಿದ್ದಾರೆ.