ತಿರುವನಂತಪುರ: ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಬಸ್‍ಗಳ ಒಳಗೆ ಚಾಜಿರ್ಂಗ್ ಪಾಯಿಂಟ್‍ಗಳನ್ನು ಬಳಸಿದರೆ ಡೇಟಾ ಸೋರಿಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.
ಇದನ್ನು ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುತ್ತದೆ. ಜ್ಯೂಸ್ ಜಾಕಿಂಗ್ ಬಗ್ಗೆ ಕೇರಳ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಒದಗಿಸಲಾದ ಉಚಿತ ಚಾರ್ಜಿಂಗ್ ಪಾಯಿಂಟ್‍ಗಳ ಮೂಲಕ ಹ್ಯಾಕರ್‍ಗಳು ನಿಮ್ಮ ಡೇಟಾವನ್ನು ಕದಿಯಬಹುದು ಎಂದು ಕೇರಳ ಪೋಲೀಸರು ಎಚ್ಚರಿಸಿದ್ದಾರೆ. ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಸೋರಿಕೆಯನ್ನು ತಡೆಗಟ್ಟಲು, ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಚಾರ್ಜ್ ಮಾಡುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‍ಗಳಿಂದ ಚಾರ್ಜ್ ಮಾಡುವಾಗ ನಿಮ್ಮ ಪೋನ್, ಟ್ಯಾಬ್ ಇತ್ಯಾದಿಗಳನ್ನು ಸ್ವಿಚ್ ಆಫ್ ಮಾಡಿ.
ಪೋನ್ ಚಾರ್ಜ್ ಆಗುತ್ತಿರುವಾಗ ಪ್ಯಾಟರ್ನ್ ಲಾಕ್, ಫಿಂಗರ್‍ಪ್ರಿಂಟ್, ಪಾಸ್‍ವರ್ಡ್‍ನಂತಹ ಭದ್ರತಾ ವಿಧಾನಗಳನ್ನು ಬಳಸಬೇಡಿ.
ಸಾಮಾನ್ಯ ಯು.ಎಸ್.ಬಿ. ಚಾರ್ಜಿಂಗ್ ಯೂನಿಟ್‍ಗಳ ಬದಲಿಗೆ ಎ.ಸಿ. ಪವರ್ ಔಟ್‍ಲೆಟ್‍ಗಳನ್ನು ಬಳಸಿ. ನಿಮ್ಮ ಸ್ವಂತ ಪವರ್ ಬ್ಯಾಂಕ್‍ನೊಂದಿಗೆ ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡಿ.
ಕೇಬಲ್ ಮೂಲಕ ಹ್ಯಾಕಿಂಗ್ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಯು.ಎಸ್.ಬಿ. ಡೇಟಾ ಬ್ಲಾಕರ್ ಅನ್ನು ಬಳಸಬಹುದು.