ಕಾಸರಗೋಡು: ಕಡಪ್ಪುರ ಶ್ರೀ ಕುರುಂಬಾ ಭಗವತೀ ದೇವಸ್ಥಾನದಲ್ಲಿ ಐದು ದಿವಸಗಳ ಕಾಲ ನಡೆಯಲಿರುವ ಭರಣಿ ಮಹೋತ್ಸವಕ್ಕೆ ಶನಿವಾರ ಧ್ವಜಾರೋಹಣ ನಡೆಯಿತು. ಭರಣಿಮಹೋತ್ಸವ 10ರಂದು ಧ್ವಜಾವರೋಹಣದೊಂದಿಗೆ ಸಮಾರೋಪಗೊಳ್ಳಲಿದೆ.
ಧ್ವಜಾರೋಹಣದ ನಂತರ ಪಾರಂಪರಿಕ ಸುಡುಮದ್ದು ಪ್ರದರ್ಶನ ನಡೆಯಿತು. ನಂತರ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಪ್ರತಿದಿನ ನಂತರ ಬೆಳಗ್ಗೆ 7, ಮಧ್ಯಾಹ್ನ 12, ಸಂಜೆ 6 ಮತ್ತು ರಾತ್ರಿ 8ಕ್ಕೆ ವಿಶೇಷ ಪೂಜೆ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕೋಲ್ಕಳಿ, ಅಭೋಗ ಮ್ಯೂಸಿಕ್ ಬ್ಯಾಂಡ್ ತಂಡದಿಂದ ಫ್ಯೂಷನ್ ಶೋ ನಡೆಯಿತು.
ಏಪ್ರಿಲ್ 7ರಂದು ಸಂಜೆ 7ಕ್ಕೆ ಕೊಲ್ಕಳಿ, ರಾತ್ರಿ 9ಕ್ಕೆ ಉತ್ಸವ, 10ಕ್ಕೆ ಲಕ್ಕಿ ಸ್ಟಾರ್ಸ್ ಮೇಘಾ ಶೋ, ಏಪ್ರಿಲ್ 8 ರಂದು ಸಂಜೆ 7ಕ್ಕೆ ಕೋಲ್ಕಳಿ, 9ಕ್ಕೆ ಉತ್ಸವ, 10ಕ್ಕೆ ಕೋಯಿಕ್ಕೋಡ್ ಮಿಲೇನಿಯಂ ಸ್ಟಾರ್ಸ್ ಕಾಮಿಡಿ ಸೂಪರ್ ಕಾರ್ಯಕ್ರಮ ಜರುಗಲಿದೆ.
9ರಂದು ಮಹೋತ್ಸವ, ಕಾಷ್ಠ ಸಂಪರ್ಪಣೆ, ಹೈ ಪವರ್ ಮೆಗಾಮ್ಯೂಸಿಕಲ್ ಸಂಗೀತ ರಸಮಂಜರಿ, ನಂತರ ಕಡಪ್ಪುರ ಭಗವತೀ ಉತ್ಸವ ನಡೆಯುವುದು. ಏಪ್ರಿಲ್ 10ರಂದು ಮಧ್ಯಾಹ್ನ 3ಕ್ಕೆ ಮಹೋತ್ಸವ, ಭರಣೀ ಅವಭೃತಸ್ನಾನ, ನಂತರ ಕೋಲ್ಕಳಿ, ಧ್ವಜಾವರೋಹಣ ನಡೆಯುವುದು.