ಕುಂಬಳೆ: ಕ್ರೈಸ್ತ ಬಾಂಧವರು ಭಾನುವಾರ ಭಕ್ತಿ-ಸಡಗರದೊಂದಿಗೆ ಪಾಸ್ಖ ಹಬ್ಬ ಆಚರಿಸಿದರು. ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಪಾಸ್ಖ ಹಬ್ಬದ ಅಂಗವಾಗಿ ಶನಿವಾರ ರಾತ್ರಿ ಜಾಗರಣೆಯ ರಾತ್ರಿ ಆಚರಿಸಲಾಯಿತು. ಹೊಸ ಬೆಳಕಿನ ಆಶೀರ್ವಚನ, ಬಳಿಕ ದಿವ್ಯಬಲಿಪೂಜೆ, ಸಂತರ ಸ್ಮರಣೆ, ಹೊಸ ನೀರಿನ ಆಶೀರ್ವಚನ ನಡೆಯಿತು. ಪವಿತ್ರ ಬೈಬಲ್‍ನ ಹೊಸ ಹಾಗೂ ಹಳೆಯ ಒಡಂಬಡಿಕೆಯಿಂದ ಆಯ್ದ ಭಾಗಗಳ ವಾಚನ, ಕೀರ್ತನೆ, ಪ್ರವಚನ ನಡೆಯಿತು, ಭಾನುವಾರ ಪಾಸ್ಖ ಹಬ್ಬದ ಅಂಗವಾಗಿ ದಿವ್ಯಬಲಿಪೂಜೆ ನಡೆಯಿತು. ಧರ್ಮಗುರು ಫಾ. ಹೆರಾಲ್ಡ್ ಡಿಸೋಜ ನೇತೃತ್ವ ನೀಡಿದರು. ಸಹಾಯಕ ಧರ್ಮಗುರು ಫಾ. ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು.