ತಿರುವನಂತಪುರಂ: ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ರಹಾಂ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.
ಅವರ ಬಳಿ ಈಋಊಔ ಮತದಾರರ ಗುರುತಿನ ಚೀಟಿಯ ಸಂಖ್ಯೆಯದ್ದೇ ಮತ್ತೊಂದು ಗುರುತಿನ ಚೀಟಿ ಇರುವುದು ಪತ್ತೆಯಾದ ಕಾರಣ ಮತಚಲಾವಣೆಗೆ ತಡೆ ನೀಡಲಾಯಿತು.
ಶುಕ್ರವಾರ ಬೆಳಗ್ಗೆ ಜಗತಿ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದಾಗ ಇದು ಸ್ಪಷ್ಟವಾಯಿತು. ಸಂಪುಟ ದರ್ಜೆಯ ಮುಖ್ಯಮಂತ್ರಿಗಳ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ರಹಾಂ ಅವರ ಮತದಾರರ ಪಟ್ಟಿಯಲ್ಲಿ ಮತ್ತೊಬ್ಬ ಮಹಿಳೆಯ ಹೆಸರಲ್ಲಿ ಅದೇ ಗುರುತಿನ ಚೀಟಿ ಸಂಖ್ಯೆ ಇದ್ದು, ಅವರು ಅದಾಗಲೇ ಮತಚಲಾಯಿಸಿದ್ದರು.
ಒಂದೇ ಸಂಖ್ಯೆಯ ಎರಡು ಗುರುತಿನ ಚೀಟಿಗಳು ಹೇಗೆ ಬಂದವು ಎಂಬುದು ಸ್ಪಷ್ಟÁಗಿಲ್ಲ. ಅವರು ಮತದಾನ ಮಾಡಲು ಸಾಧ್ಯವಾಗದೆ ಹಿಂತಿರುಗಿದರು ಮತ್ತು ನಂತರ ಜಿಲ್ಲಾಧಿಕಾರಿಗೆ ದೂರು ನೀಡಿದರು.