ಕಾಸರಗೋಡು: ನವ ಜನಶಕ್ತಿ ಕಾಂಗ್ರೆಸ್(ಎನ್‍ಜೆಸಿ)ಕಾಸರಗೋಡು ಜಿಲ್ಲಾ ನಾಯಕತ್ವದ ವಿರುದ್ಧ ಧ್ವನಿಯೆತ್ತಿರುವ ಇದರ ಪದಾಧಿಕಾರಿಗಳು ಸಾಮೂಹಿಕವಾಗಿ ಆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಎನ್‍ಸಿಪಿ ಅಜಿತ್‍ಪವಾರ್ ಬಣದೊಂದಿಗೆ ವಿಲೀನವಾಗಿರುವುದಾಗಿ ಎನ್‍ಸಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಬಿನ್ ಸಿ ಭಾಸ್ಕರ್ ಕಾಸರಗೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕ ಲಾಭದತ್ತ ಮಾತ್ರ ದೃಷ್ಟಿ ಹರಿಸುತ್ತಿರುವ ಎನ್‍ಜೆಸಿ ನೇತಾರರ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಆ ಪಕ್ಷದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡೈಸ್ ಆಂಟನಿ ಸೇರಿದಂತೆ ಎನ್‍ಜೆಸಿ, ಯುವ, ವಿದ್ಯಾರ್ಥಿ ಮತ್ತು ಮಹಿಳಾ ವಿಭಾಗಗಳ ಪ್ರಮುಖ ಜಿಲ್ಲಾ ಮುಖಂಡರು ಎನ್‍ಸಿಪಿ ಸೇರ್ಪಡೆಗೊಂಡಿದ್ದಾರೆ. ಕೇರಳದಲ್ಲಿ ಎನ್‍ಸಿಪಿ ಅಜಿತ್ ಪವಾರ್ ಬಣ ಎನ್‍ಡಿಎ ಮಿತ್ರಪಕ್ಷವಾಗಿ ಮುಂದುವರಿಯುತ್ತಿದೆ.
ಎನ್‍ಜೆಸಿ, ಯುವ, ವಿದ್ಯಾರ್ಥಿ ಮತ್ತು ಮಹಿಳಾ ವಿಭಾಗಗಳ ಪ್ರಮುಖ ಜಿಲ್ಲಾ ಮುಖಂಡರು ಡೈಸ್ ಆಂಟನಿ ನೇತೃತ್ವದಲ್ಲಿ ಎನ್‍ಸಿಪಿಯ ಭಾಗವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಏಪ್ರಿಲ್ 13 ರಂದು ಕಾಞಂಗಾಡ್‍ನಲ್ಲಿ ನಡೆಯಲಿರುವ ವಿಲೀನ ಸಭೆಯಲ್ಲಿ ಕಾರ್ಯಕರ್ತರು ರಾಜ್ಯಾಧ್ಯಕ್ಷ ರೋಯ್ ವರಿಕಾಟ್ ಅವರಿಂದ ಸದಸ್ಯತ್ವ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನವ ಜನಶಕ್ತಿ ಕಾಂಗ್ರೆಸ್(ಎನ್‍ಜೆಸಿ) ಪ್ರಧಾನ ಕಾರ್ಯದರ್ಶಿಡೈಸ್ ಆಂಟನಿ, ಎನ್‍ವೈಸಿ ರಾಜ್ಯ ಅಧ್ಯಕ್ಷ ಶರತ್ ಮೋಹನ್, ಎನ್‍ವೈಸಿ ರಾಜ್ಯ ಕಾರ್ಯದರ್ಶಿ ಸಾಗರ್ ಮೋಹನ್, ಎನ್‍ಜೆಎಸ್‍ಸಿ ಕಾಸರಗೋಡು ಜಿಲ್ಲಾಧ್ಯಕ್ಷ ಚಾಲ್ರ್ಸ್ ಪೀಟರ್ ಕ್ಸೇವಿಯರ್ ಉಪಸ್ಥಿತರಿದ್ದರು.