HEALTH TIPS

ಕಾರ್ಮಿಕರ ದಿನ: ಕಾರ್ಮಿಕರ ದಿನ ಹುಟ್ಟಿಕೊಂಡಿದ್ದೇಕೆ.? ಬಲಿದಾನದ ದಿನದ ಬಗ್ಗೆ ಗೊತ್ತಾ?

 ಪ್ರತಿ ವರ್ಷ ಮೇ ಮೊದಲ ದಿನವನ್ನು ಮೇ ದಿನ ಅಥವಾ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತೆ. ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವ ಸಲುವಾಗಿರುವ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, ಮೇ 1ರ ಬುಧವಾರ ಮೇ ದಿನವನ್ನು ಆಚರಿಸಲಾಗುವುದು.

ಮೇ ದಿನ ಅಥವಾ ಕಾರ್ಮಿಕರ ದಿನವನ್ನು ಬಾಂಗ್ಲಾದೇಶ, ಕ್ಯೂಬಾ, ಭಾರತ, ಜರ್ಮನಿ, ಚೀನಾ ಮುಂತಾದ ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವೆಂದು ಆಚರಿಸಲಾಗುತ್ತದೆ.

ಕಾರ್ಮಿಕರಿಗೆ ಅವರ ಹಕ್ಕುಗಳನ್ನು ನೆನಪಿಸಲು ಮತ್ತು ಸಮಾಜಕ್ಕೆ ಅವರ ಕೊಡುಗೆಗಳಿಗಾಗಿ ಅವರು ಅರ್ಹವಾದ ಮನ್ನಣೆಯನ್ನು ನೀಡಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಕಾರ್ಮಿಕರ ದಿನ ಏಕೆ ಆಚರಿಸುತ್ತಾರೆ? ಅದರ ಮಹತ್ವವೇನು ಎಂಬುದರ ಕುರಿತು ನಾವು ತಿಳಿದುಕೊಳ್ಳೋಣ.


ಕಾರ್ಮಿಕರ ದಿನಾಚರಣೆ ಹುಟ್ಟುಕೊಂಡಿದ್ದು ಹೇಗೆ?

ಕಾರ್ಮಿಕರ ದಿನದ ಆಚರಣೆ ಯಾವಾಗ ಆರಂಭಗೊಂಡಿತು ಎಂದು ಹುಡುಕುತ್ತಾ ಹೋದರೆ ಅದು 19ನೇ ಶತಮಾನದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ಮುನ್ನ ಆರಂಭಗೊಂಡಿದೆ ಎಂದು ತಿಳಿಯುತ್ತದೆ. ಮೇ 1, 1886 ರಂದು, ಸುಮಾರು 200,000 ಕಾರ್ಮಿಕರು ದಿನಕ್ಕೆ 8 ಗಂಟೆಗಳ ಕೆಲಸಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಈ ಕೆಲಸದ ಅವಧಿ ಕುರಿತು ಚರ್ಚೆಗಳು, ಪ್ರತಿಭಟನೆಗಳು, ಪರ ವಿರೋಧ ಚರ್ಚೆಗಳೂ ನಡೆಯುತ್ತಲೇ ಇವೆ.

ಉದ್ಯಮಿಗಳು ಕಾರ್ಮಿಕರು ಹೆಚ್ಚು ಕೆಲಸ ಮಾಡಬೇಕೆಂದು, ಕಾರ್ಮಿಕ ಪರ ಸಂಘಟನೆಗಳು ಕೆಲಸದ ಅವಧಿ ಹಾಗೂ ಕೆಲಸ ಮಾಡುವ ಪರಿಸರದ ಕುರಿತಂತೆ ಹೆಚ್ಚು ಗಮನ ನೀಡುವಂತೆ ವಾದ ಮಾಡುತ್ತಾ ಬರಲಾಗಿದೆ. ಜೊತೆಗೆ ಒಂದಿಷ್ಟು ಕೆಲಸದ ಸ್ಥಳಗಳಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಕೆಲಸಗಳು ಸಹ ನಡೆಯುತ್ತಿವೆ.

ಇನ್ನು ಇದೇ ಕಾರಣಕ್ಕೆ 1886ರಲ್ಲಿ ಚಿಕಾಗೋದಲ್ಲಿ ಪ್ರತಿಭಟನೆ ನಡೆಸಲಾಗಿತ್ತು, ಇಡೀ ದೇಶದ ಕಾರ್ಮಿಕರು ಅಲ್ಲಿ ಸೇರಿದ್ದರು, ಆದರೆ ಈ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು. ಪೊಲೀಸರು ಕಾರ್ಮಿಕರ ಮೇಲೆ ಲಾಠಿ ಬೀಸಿದ್ದರು. ಆದರೆ ಚಿಕಾಗೋದ ಹೇಮಾರ್ಕೆಟ್ ಸ್ಕ್ವೇರ್‌ನಲ್ಲಿ ನಡೆದ ಶಾಂತಿಯುತ ಸಭೆ ವೇಳೆ ಬಾಂಬ್ ಸ್ಫೋಟಗೊಂಡು ಈ ಪ್ರತಿಭಟನೆ ದುರಂತವಾಗಿ ತಿರುಗಿತು. ಹಲವರು ಪ್ರಾಣ ಕಳೆದುಕೊಂಡರು. ಈ ಘಟನೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಯಿತು.

ಇದಾದ ಬಳಿಕ ಈ ಕಾರ್ಮಿಕರ ಬಲಿದಾನವನ್ನು ನೆನೆಯಲೆಂದು ಈ ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲು ನಿರ್ಧರಿಸಲಾಯಿತು. ಹೀಗಾಗಿ 1889ರ ಮೇ 1ರಂದು ಮೊದಲ ಕಾರ್ಮಿಕರ ದಿನ ಘೋಷಣೆಯಾಗಿತ್ತು. ಆದರೆ ಅಧಿಕೃತವಾಗಿ 1890ರ ಮೇ 1ರಂದು ಕಾರ್ಮಿಕರ ದಿನಾಚರಣೆ ಆರಂಭಗೊಂಡಿತು.


ಕಾರ್ಮಿಕರ ದಿನದ ಮಹತ್ವ

ಕಾರ್ಮಿಕರು ತಮ್ಮ ಶ್ರಮ ದಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತಾರೆ. ನೀವು ಕೆಲವು ರಾಷ್ಟ್ರಗಳ ನೋಡಬಹುದು. ಅಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಇದೆ. ಹೀಗಾಗಿ ಆ ದೇಶಕ್ಕೆ ವಲಸೆ ಹೋಗುವವರು, ಹಾಗೂ ನುರಿತ ಕಾರ್ಮಿಕರ ಕೊರತೆಯ ಹಿನ್ನೆಲೆ ಆ ದೇಶದ ಅಭಿವೃದ್ಧಿ ಕುಂಠಿತವಾಗುವುದನ್ನು ಸಹ ನಾವು ನೋಡಬಹುದು.

ಈ ಕಾರ್ಮಿಕರ ದಿನವು ಕಾರ್ಮಿಕರ ಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಶೋಷಣೆಗೆ ಒಳಗಾಗದಂತೆ ಅವರನ್ನು ರಕ್ಷಿಸುವ ಗುರಿಯನ್ನು ಸಹ ಹೊಂದಿದೆ. ಇದರ ಜೊತೆಗೆ ಕಾರ್ಮಿಕರು ತಮ್ಮ ಕೆಲಸ ಸ್ಥಳದಲ್ಲಿ ಯಾವ ರೀತಿಯ ಹಕ್ಕುಗಳ ಹೊಂದಿರುತ್ತಾರೆ. ಅವರ ದುಡಿಮೆಗೆ ತಕ್ಕ ಫಲವೇನು? ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಯುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries