ಕಾಸರಗೋಡು: ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಲ್‍ಡಿಎಫ್ ಅಭ್ಯರ್ಥಿಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ.
ಕಾಸರಗೋಡು ಎಲ್‍ಡಿಎಫ್ ಅಭ್ಯರ್ಥಿ ಎಂವಿ ಬಾಲಕೃಷ್ಣನ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅನುಮತಿಯಿಲ್ಲದೆ ರೋಡ್ ಶೋ ನಡೆಸಿರುವುದು, ಧ್ವನಿವರ್ಧಕಗಳನ್ನು ಬಳಸುವುದು ಮತ್ತು ವಾಣಿಜ್ಯ ವಾಹನಗಳ ಮೇಲೆ ಧ್ವಜಗಳು ಮತ್ತು ಸ್ಟಿಕ್ಕರ್‍ಗಳನ್ನು ಬಳಸಿದ್ದಕ್ಕಾಗಿ ನೋಟಿಸ್ ಜಾರಿಗೊಳಿಸಲಾಗಿದೆ.
ಉಪ ಜಿಲ್ಲಾಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಸುಫಿಯಾನ್ ಅಹಮದ್ ಅವರು ಈ ಬಗ್ಗೆ ಸೂಚನೆ ನೀಡಿದರು. ಎರಡು ದಿನಗಳಲ್ಲಿ ಖಚಿತ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶೋಕಾಸ್ ನೋಟಿಸ್ ನಲ್ಲಿ ತಿಳಿಸಲಾಗಿದೆ.