HEALTH TIPS

ಕೈಲಾಸ ಪರ್ವತದ ರಹಸ್ಯ! ಈವರೆಗೂ ಯಾರೊಬ್ಬರು ಶಿಖರದ ತುದಿಯನ್ನು ಮುಟ್ಟಿಲ್ಲ ಏಕೆ? ಇಲ್ಲಿದೆ ಅಚ್ಚರಿಯ ಕಾರಣ

              ಡೀ ಜಗತ್ತು ಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ವಿಶ್ವದಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ. ಅವುಗಳನ್ನು ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುತ್ತದೆ. ಅಂಥದ್ದೇ ನಿಗೂಢ ತಾಣವೊಂದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಇಂದು ನಾವು ಹೇಳ ಹೊರಟಿರುವುದು ಕೈಲಾಸ ಪರ್ವತದ ಬಗ್ಗೆ.

             ನಿಗೂಢ ಕೈಲಾಸ ಪರ್ವತದ ಶಿಖರವನ್ನು ಇದುವರೆಗೂ ಯಾರೂ ಏಕೆ ಏರಿಲ್ಲ? ಇದನ್ನು ಕಾಂಗ್ರಿನ್‌ಬೋಕ್ ಶಿಖರ ಎಂತಲೂ ಕರೆಯುತ್ತಾರೆ. ಇದು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ನ್ಗಾರಿ ಪ್ರಾಂತ್ಯದಲ್ಲಿದೆ.

                ಪರ್ವತಾರೋಹಿಗಳ ಪ್ರಕಾರ ಕೈಲಾಸ ಪರ್ವತದ ಶಿಖರದಲ್ಲಿನ ಹವಾಮಾನವು ಮೌಂಟ್ ಎವರೆಸ್ಟ್‌ಗಿಂತ ತುಂಬಾ ಕಠಿಣವಾಗಿದೆ. ಇದರಿಂದ ಪರ್ವತ ಏರುವುದು ತುಂಬಾ ಕಠಿಣವಾಗಿದೆ. ಇದಲ್ಲದೆ, ಈ ಪರ್ವತವನ್ನು ಏರುವಾಗ ದೇಹದಲ್ಲಿ ದೌರ್ಬಲ್ಯವನ್ನು ಎದುರಿಸುತ್ತಾರೆ. ಅಲ್ಲದೆ, ಏರುತ್ತಾ ಸಾಗಿದಂತೆ ದಿಕ್ಕೆ ತೋಚದಂತಾಗುತ್ತದೆ.

                ಈ ಮೇಲೆ ಹೇಳಿದ ಅಂಶವು ಪರ್ವತಾರೋಹಿಗಳ ಅನುಭವವನ್ನು ಆಧರಿಸಿದೆಯಾದರೂ, ಕೆಲವು ಪೌರಾಣಿಕ ದಂತಕಥೆಗಳೂ ಇವೆ. ಹಿಂದೂ ಧರ್ಮದ ಪ್ರಕಾರ, ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದೆ. ಶಿವನು ಪರ್ವತದ ಮೇಲ್ಭಾಗದಲ್ಲಿ ತನ್ನ ಪತ್ನಿ ಪಾರ್ವತಿ ಮತ್ತು ಅವನ ಅನುಯಾಯಿಗಳೊಂದಿಗೆ ವಾಸಿಸುತ್ತಾನೆ. ತನ್ನ ಜೀವನದಲ್ಲಿ ಯಾವುದೇ ಪಾಪವನ್ನು ಮಾಡದವನು ಮಾತ್ರ ಈ ಪರ್ವತದ ತುದಿಯನ್ನು ತಲುಪಬಹುದು ಎಂದು ನಂಬಲಾಗಿದೆ.

             ಇದಲ್ಲದೆ, ಈ ಪರ್ವತದೊಂದಿಗೆ ಇತರ ಕೆಲವು ನಂಬಿಕೆಗಳಿವೆ. ಜೈನ ಧರ್ಮದ ಅನುಯಾಯಿಗಳು ತಮ್ಮ ಮೊದಲ ತೀರ್ಥಂಕರರಾದ ರಿಷಬನಾಥರು ಕೈಲಾಸ ಪರ್ವತದಲ್ಲಿ ತತ್ವ ಜ್ಞಾನವನ್ನು (ಆಳವಾದ ಜ್ಞಾನ) ಪಡೆದರು ಎಂದು ಹೇಳುತ್ತಾರೆ. ಇದಲ್ಲದೆ ಮಹಾತ್ಮ ಬುದ್ಧನು ಕೈಲಾಸ ಪರ್ವತಗಳ ಮೇಲೆ ನೆಲೆಸಿದ್ದಾನೆ ಎಂದು ಬೌದ್ಧರು ನಂಬುತ್ತಾರೆ.

                ಅನೇಕ ಪರ್ವತಾರೋಹಿಗಳು ಕೈಲಾಸ ಪರ್ವತವನ್ನು ಏರಲು ಪ್ರಯತ್ನಿಸದಿರಲು ಮತ್ತೊಂದು ಕಾರಣವೆಂದರೆ ಅದು ಅತಿ ಎತ್ತರದ ಪರ್ವತ ಮಾತ್ರವಲ್ಲ, ಚೀನಾ ಸರ್ಕಾರದಿಂದ ಕ್ಲೈಂಬಿಂಗ್ ಪರವಾನಗಿಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಇಂದಿಗೂ ಕೈಲಾಶ ಪರ್ವತ ನಿಗೂಢವಾಗಿಯೇ ಉಳಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries