ಉಪ್ಪಳ: ಪೈವಳಿಕೆ ಬಾಯಾರು ಸಮೀಪದ ಕನಿಯಾಲ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಯವರ ಚುನಾವಣಾ ವಾಹನ ಪ್ರಚಾರ ಜಾಥ ನಿನ್ನೆ ನಡೆಯಿತು.
ಬಿಜೆಪಿ ಮಂಡಲಾಧ್ಯಕ್ಷ ಆದರ್ಶ ಬಿ ಎಂ, ಉದ್ಘಾಟಿಸಿ ಮಾತನಾಡಿ, ದೇಶದ ಸಮಗ್ರ ಬೆಳವಣಿಗೆ ಮುಂದುವರಿಕೆಗೆ ಮೋದಿ ಮತ್ತೆ ಪ್ರಧಾನಿಯಾಗಬೇಕಾದದ್ದು ದೇಶದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತಿಕೆಯಿಂದ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಹೇಳಿದರು. ದೇಶದ ಪ್ರತಿ ಪ್ರಜೆಯು ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಗಳ ಫಲನುಭವಿಗಳು ಪ್ರತಿಯೊಬ್ಬ ನಾಗರಿಕನನ್ನೂ ಎತ್ತರಿಕ್ಕೇರಿಸಿದೆ ಎಂದು ಅವರು ಈ ಸಂದರ್ಭ ಹೇಳಿದರು.
ವಿಘ್ನೇಶ್ವರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಶೆಟ್ಟಿ ಅರಿಬೈಲು, ಸುಧಾಮ ಗೋಸಾಡ, ವಸಂತ ಮಯ್ಯ, ಹರಿಶ್ಚಂದ್ರ ಎಂ, ಸತೀಶ್ಚಂದ್ರ ಭಂಡಾರಿ ಕೋಳಾರು, ಸದಾಶಿವ ಚೇರಾಲು,ಎ.ಕೆ.ಕಯ್ಯಾರು ಮೊದಲದವರು ಉಪಸ್ಥಿತರಿದ್ದರು. . ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು. ಅಭ್ಯರ್ಥಿ ಅಶ್ವಿನಿ ಮತಯಾಚನೆ ನಡೆಸಿದರು.