ಕಾಸರಗೋಡು: ಮಹಾ ಶ್ರೀಚಕ್ರ ನವಾವರಣ ಪೂಜೆ ಶ್ರೀಎಡನೀರು ಮಠದಲ್ಲಿ ಸಂಪನ್ನಗೊಂಡಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಚಿನ್ಮಯಾ ಮಿಷನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಅವರ ತಾಂತ್ರಿಕತ್ವದಲ್ಲಿ ಕಾರ್ಯಕ್ರಮ ನಡೆಯಿತು. ವೇದ ಮೂರ್ತಿ ನರಸಿಂಹ ಅಡಿಗ ಕೊಲ್ಲೂರು ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಹವನ ನಡೆಯಿತು. ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ನಡೆಯಿತು. ವಯಲಿನ್‍ನಲ್ಲಿ ವಿದ್ವಾನ್ ಹೇಮಂತ್‍ಕುಮಾರ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಆನೂರ್ ದತ್ತಾತ್ರೇಯ ಶರ್ಮ ಬೆಂಗಳೂರು ಹಾಗೂ ಘಟಂನಲ್ಲಿ ವಿದ್ವಾನ್ ಫಣೀಂದ್ರ ಬೆಂಗಳೂರು ಸಹಕರಿಸಿದರು. ಈ ಸಂದರ್ಭ ಸುಬ್ರಹ್ಮಣ್ಯ ಕಾರಂತ ಪ್ರಸ್ತುತಿಯೊಂದಿಗೆ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು.