ಕಾಸರಗೋಡು: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜತೆಗೆ ತಾರÀಮ್ಯರಹಿತ ಆಡಳಿತದ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿರುವುದಾಗಿ ಬಿಜೆಪಿ ಕೇರಳ ರಾಜ್ಯ ಪ್ರಭಾರಿ ಪ್ರಕಾಶ್ ಜಾವೇಡ್ಕರ್ ಹೇಳಿದರು.
ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇರಳದಲ್ಲಿ ಈ ವರ್ಷದ ಚುನಾವಣಾ ಚಿತ್ರಣ ಸಮಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ಕಳೆದ 40 ತಿಂಗಳಲ್ಲಿ ರಾಜ್ಯದಲ್ಲಿ 5.8 ಕೋಟಿ ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ ಮತ್ತು 1.5 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಲಾಗಿದೆ. ಇದು ಇನ್ನೂ 60 ತಿಂಗಳು ಮುಂದುವರಿಯಲಿದೆ. ಮುದ್ರಾ ಯೋಜನೆಯಯನ್ವಯ 50 ಲಕ್ಷ ಗ್ರಾಹಕರು, 50,000 ರಿಂದ 10 ಲಕ್ಷದವರೆಗೆ ಸಾಲ ಪಡೆದು ಸ್ವವಲಂಬಿ ಜೀವನ ಸಾಗಿಸುತ್ತಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯನ್ವಯ 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ, ಕಿಸಾನ್ ಪ್ರಶಸ್ತಿ ನಿಧಿಯನ್ವಯ 32ಸಾವಿರದಂತೆ 32 ಲಕ್ಷ ಕೃಷಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಷಟ್ಪಥ ಹೆದ್ದಾರಿ ಯೋಜನೆ ಸಾರಿಗೆ ವಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ. ಕೇರಳದ ಎಡರಂಗ ಆಡಳಿತ ರಾಜ್ಯವನ್ನು ಆರ್ಥಿಕ ದೀವಾಳಿಯತ್ತ ಕೊಂಡೊಯ್ದಿರುವುದಾಗಿ ತಿಳಿಸಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶೀಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪದ್ಮೇಶ್ ಕೆ.ವಿ ಸ್ವಾಗತಿಸಿದರು.
ಎನ್‍ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಧ್ಯಕ್ಷ ರವೀಶ ತಂತ್ರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್ ಮತ್ತು ವಿಜಯ ರೈ ಉಪಸ್ಥಿತರಿದ್ದರು.