ಬದಿಯಡ್ಕ: ಕನ್ಯಪ್ಪಾಡಿ ಆಶ್ರಯ ಆಶ್ರಮಕ್ಕೆ ಬೆಂಗಳೂರಿನ ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ವತಿಯಿಂದ 75000 ರೂಪಾಯಿ ಧನ ಸಹಾಯವನ್ನು ಹಸ್ತಾಂತರಿಸಲಾಯಿತು.
ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ನಾಗರಾಜ ಉಪ್ಪಂಗಳ ಇವರು ಧನಸಹಾಯದ ಚೆಕ್ಕನ್ನು ಆಶ್ರಯ ಆಶ್ರಮದ ಟ್ರಸ್ಟಿ ರಮೆಶ್ ಕಳೇರಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭಲಾಸ್ಟ್ ಮಿನಿಟ್ ಡಾಟ್ಕಾಮ್ ಬೆಂಗಳೂರಿನ ಅಭಿಷೇಕ್ ಕೋಳಿಕಜೆ, ಅವಿನಾಶ್ ದೈತೋಟ, ಅಗಲ್ಪಾಡಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಗಣೇಶ್ ಚೆರ್ಕೂಡ್ಲು, ಕರಾಡ ಸಹಾಯಕ ಬಂಧು ಡಾ. ಕಾರ್ತಿಕ್, ಶ್ರೀಮತಿ ಶುಭ ಕಾರ್ತಿಕ್ ಕೋಳಿಕ್ಕಜೆ ಹಾಗೂ ಶೌರಿ ಕೋಳಿಕ್ಕಜೆ ಉಪಸ್ಥಿತರಿದ್ದರು.
ದಾನಿಗಳಿಗೆ ರಮೇಶ್ ಕಳೇರಿ ಅವರು ಗೌರವಾರ್ಪಣೆ ಸಲ್ಲಿಸಿದರು. ಆಶ್ರಮದ ಹಿತೈಷಿ ಹಾಗೂ ಸ್ವಯಂಸೇವಕ ರಾಜೇಶ್ ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿದರು.