ನಾಳೆ ವಿಶ್ವ ಆಟಿಸಂ ಜಾಗೃತಿ ದಿನ. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಆಟಿಸಂ ಬೆಳವಣಿಗೆಯ ಅಸಾಮಥ್ರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತದೆ. ಏಪ್ರಿಲ್ 2ರಂದು ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸ್ವಲೀನತೆ ಹೊಂದಿರುವ ಜನರು ಸಾಮಾನ್ಯವಾಗಿ ಕಲಿಕೆ, ಸಾಮಾಜಿಕ ಸಂವಹನ ಮತ್ತು ಭಾಷೆಯ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಸವಾಲುಗಳನ್ನು ಜಯಿಸಲು ಮತ್ತು ಮೂಲಭೂತ ಜೀವನ ಕೌಶಲ್ಯಗಳನ್ನು ಕಲಿಯಲು ಥೆರಪಿ ಅಗತ್ಯವಾಗಬಹುದು. ಅಗತ್ಯ ಅರಿವು ಮೂಡಿಸಲು ಈ ದಿನವನ್ನು ಸಾಮಾನ್ಯವಾಗಿ ಬೆಂಬಲಿಸಲಾಗುತ್ತದೆ.
ಆದರೆ ಕೆಲವು ಜನರು ಸ್ವಲೀನತೆಯಿಂದಾಗಿ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರಬಹುದು, ಮತ್ತೆ ಕೆಲವರು ತುಲನಾತ್ಮಕವಾಗಿ ಸಾಮಾನ್ಯ ಜೀವನವನ್ನು ನಡೆಸಬಹುದು. ಆಟಿಸಂ ಎನ್ನುವುದು ಅರಿವಿನ ಸಾಮಥ್ರ್ಯಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಅಥವಾ ಪರಿಣಾಮ ಬೀರದಿರುವ ಅಸ್ವಸ್ಥತೆಯಾಗಿದೆ. ಸ್ವಲೀನತೆ ಹೊಂದಿರುವ ಕೆಲವು ಮಕ್ಕಳು ಅಸಹಜ ಬುದ್ಧಿಮತ್ತೆಯನ್ನು ತೋರಿಸುತ್ತಾರೆ. ಕೆಲವರು ಬೆಳವಣಿಗೆಯಲ್ಲಿ ಅಸಮರ್ಥತೆಯನ್ನು ಹೊಂದಿರಬಹುದು.
ಜರ್ನಲ್ ಆಫ್ ಆಟಿಸಂ ಅಂಡ್ ಡೆವಲಪ್‍ಮೆಂಟಲ್ ಡಿಸಾರ್ಡರ್ಸ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ವಲೀನತೆ ಹೊಂದಿರುವ 40 ಪ್ರತಿಶತಕ್ಕಿಂತ ಹೆಚ್ಚು ಜನರು ಬೌದ್ಧಿಕ ಅಸಾಮಥ್ರ್ಯವನ್ನು ಹೊಂದಿದ್ದಾರೆ. ಆದರೆ ಉಳಿದವರು ಸರಾಸರಿ ಅಥವಾ ಅದಕ್ಕಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ. ಆದರೆ ಕೆಲವು ಮಕ್ಕಳು ಸೌಮ್ಯವಾದ ಸ್ವಲೀನತೆಯಿಂದ ಬಳಲುತ್ತಿದ್ದಾರೆ. ಮಾತನಾಡಲು ತೊಂದರೆ, ಬೆಳಕು, ಧ್ವನಿ ಮತ್ತು ನೋವಿಗೆ ಸೂಕ್ಷ್ಮತೆ ಇವರಲ್ಲಿ ಕಂಡುಬರುತ್ತದೆ. ಈ ವರ್ಗದಲ್ಲಿರುವ ಜನರು ಎಲ್ಲದಕ್ಕೂ ಇತರರ ಮೇಲೆ ಅವಲಂಬಿತವಾಗಿರದ ಕಾರಣ, ರೋಗನಿರ್ಣಯವು ವರ್ಷಗಳನ್ನು ತೆಗೆದುಕೊಳ್ಳಬಹುದು.
ಜೊತೆಗೆ ಸಂಪೂರ್ಣ ಆಟಿಸಂ ಬಾಧಿತ ಮಕ್ಕ್ಕಳು ಸಂವಹನ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಅಂತಹ ಮಕ್ಕಳು ತಮ್ಮ ಅಗತ್ಯಗಳನ್ನು ಪೂರೈಸಲು ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಹುದು. ಆಟಿಸ್ಟಿಕ್ ಸ್ಪೆಕ್ಟ್ರಮ್ ಡಿಸಾರ್ಡರ್ ಬೆಳವಣಿಗೆಯ ಅಸಾಮಥ್ರ್ಯಗಳನ್ನು ಸೂಚಿಸುತ್ತದೆ. ಅಂತಹ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲು ಏಪ್ರಿಲ್ 2 ರಂದು ಈ ದಿನವನ್ನು ಆಚರಿಸಲಾಗುತ್ತದೆ.