ಪೆರ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಮೇಲಕ್ಕೆ ಹತ್ತುತ್ತಿದ್ದಾಗ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಅಡ್ಯನಡ್ಕ ಬಳಿಯ ಚವರ್ಕಾಡು ಪಾರೆಯಲ್ಲಿ ನಡೆದಿದೆ. ಕೊಲ್ಲಂ ಕಲ್ಲುವಾದುಕ್ಕಲ್ ನಿವಾಸಿಯಾದ ಸಂತೋಷ್ ಕುಮಾರ್(53) ಸಾವಿಗೀಡಾದರು. ಚೆವರ್ಕಾಡು ಪಾರದ ಮೊೈದೀನ್ ಕುಂಞÂ ಅವರ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿ ಮೇಲೆರುತ್ತಿದ್ದಾಗ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು. ವಿಷಯ ತಿಳಿದು ಕಾಸರಗೋಡಿನಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಅವರನ್ನು ಮೇಲಕ್ಕೆತ್ತಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.