ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಅಗಲ್ಪಾಡಿ ವೇದಮಾತಾ ಟ್ರಸ್ಟ್ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಸಹಸ್ರಚಂಡಿಕಾ ಯಾಗ ಏ. 3ರಂದು ನಡೆಯಲಿರುವುದು. ಏ. 3ರಂದು ಬೆಳಗ್ಗೆ 5ಕ್ಕೆ ಅಗ್ನಿಪ್ರತಿಷ್ಠೆ, ಸಹಸ್ರಚಂಡಿಕಾ ಯಾಗಾರಂಭ, 10ಕ್ಕೆ ಋಕ್‍ಸಂಹಿತಾ ಯಾಗದ ಪೂರ್ಣಾಹುತಿ, 11ಕ್ಕೆ ಸಹಸ್ರಚಂಡಿಕಾ ಯಾಗದ ಮಹಾಪೂರ್ಣಾಹುತಿ ನಡೆಯುವುದು.
ಮಾ. 26ರಂದು ಯಾಗಾದಿಗಳು ಆರಂಭಗೊಂಡಿದ್ದು, ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ, ಋಕ್‍ಸಂಹಿತಾ ಯಾಗ, ಐಕಮತ್ಯಹೋಮ, ರುದ್ರಹೋಮ, ಧನ್ವಂತರೀ ಹೋಮ ನಡೆದುಬರುತ್ತಿದೆ.