ಕಾಯಂಕುಳಂ: ಎಂಎಸ್‍ಎಂ ಕಾಲೇಜಿನಲ್ಲಿ ಕಲಾ ದಿನದ ಅಂಗವಾಗಿ ಹಮಾಸ್ ಭಯೋತ್ಪಾದಕರ ವೇಷ ಧರಿಸಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳ ಬಗ್ಗೆ ಕೇರಳ ಪೆÇಲೀಸರು ಕಣ್ಣಾಮುಚ್ಚಾಲೆ ಆಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ತಿಂಗಳು 7ರಂದು ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಸಂಚರಿಸಿರುವ ಕುರಿತು ಕೇಂದ್ರ ಗುಪ್ತಚರ ದಳ ವಿವರಣೆ ಕೇಳಿದೆ. ಘಟನೆಯ ಗುಪ್ತಚರ ವರದಿಯನ್ನು ಜಿಲ್ಲಾ ಪೋಲೀಸರು ತಡೆಹಿಡಿದಿದ್ದಾರೆ. ಹಮಾಸ್ ಭಯೋತ್ಪಾದಕರ ಮುಖವಾಡಗಳೊಂದಿಗೆ ಡಮ್ಮಿ ಬಂದೂಕುಗಳು ಮತ್ತು ಧ್ವಜಗಳೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು. ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಪೋಲೀಸ್ ವರದಿಯು ಆಟಿಕೆ ಬಂದೂಕುಗಳನ್ನು ಕ್ಷುಲ್ಲಕವೆಂದು ಉಲ್ಲೇಖೀಸಿದೆ. ಆದರೆ ಭಯೋತ್ಪಾದಕ ಸಂಘಟನೆಗಳು ಮತ್ತು ಇತರ ದೇಶವಿರೋಧಿ ಶಕ್ತಿಗಳ ಧ್ವಜಗಳ ಅಡಿಯಲ್ಲಿ ಬಲ ಪ್ರದರ್ಶನವು ಯುಎಪಿಎ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದು ಕೇರಳ ಪೋಲೀಸರಿಗೆ ತಿಳಿದಿಲ್ಲವೇ ಎಂದು ಕೇಳಬೇಕಾಗಿದೆ. ವಿದ್ಯಾರ್ಥಿ ತಂಡವೊಂದು ಮುಖವಾಡ ಧರಿಸಿ ಮೆರವಣಿಗೆ ನಡೆಸಿದ್ದು, ಅವರ ಕಣ್ಣುಗಳು ಮಾತ್ರ ಕಾಣಿಸುತ್ತಿದ್ದವು. ಅವರ ಕೈಯಲ್ಲಿ ನಕಲಿ ಶಸ್ತ್ರಾಸ್ತ್ರಗಳಿದ್ದವು. ಆದರೆ, ಪೋಲೀಸರು ನಿಷ್ಕ್ರಿಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ವೈರಲ್ ಆಗುತ್ತಿದ್ದರೂ ಪೋಲೀಸರು ಮೌನ ವಹಿಸಿದ್ದಾರೆ.
ಈ ಘಟನೆಯ ಹಿಂದೆ ಎಡಪಂಥೀಯ ಜಿಹಾದಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ಕೈವಾಡವಿದೆ ಎಂಬ ವದಂತಿ ಹಬ್ಬಿದೆ. ಆಟ್ರ್ಸ್ ಡೇ ಅಂಗವಾಗಿ ಇದು ಕೇವಲ ಫ್ಯಾನ್ಸಿ ಡ್ರೆಸ್ ಎಂದು ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಹೇಳಿದರು. ಹಮಾಸ್ ಪರ ಪ್ರದರ್ಶನದ ದೃಶ್ಯಾವಳಿಗಳು ಸುಳ್ಳು ಪ್ರಚಾರ ಎಂದು ಕಾಯಂಕುಳಂ ಪೋಲೀಸರು ಹೇಳುತ್ತಾರೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ಕಾಲೇಜು ಅಧಿಕಾರಿಗಳು ಮುಂದಾಗಿದ್ದಾರೆ.