ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಪ್ರಥಮ ರಥೋತ್ಸವ ಸಂಭ್ರಮದಿಂದ ಜರಗಿತು. ರಥೋತ್ಸವ ವೀಕ್ಷಣೆ ಮಾಡಲು ಊರ ಪರ ಊರ ಸಾವಿರಾರು ಭಕ್ತರು ಆಗಮಿಸಿದ್ದರು.
ರಥೋತ್ಸವದ ನಿಮಿತ್ತ ವಿಶೇಷ ಸಿಹಿಯ ಜೊತೆ ಅನ್ನ ಪ್ರಸಾದ ವಿತರಣೆ ನಡೆಯಿತು. ವಿಶೇಷ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶ್ರೀ ಕ್ಷೇತ್ರದ ಕೊಡುಗೈ ದಾನಿ ಭಕ್ತ ವೃಂದದ ಸಹಕಾರದಿಂದ ನೂತನ ರಥ ನಿರ್ಮಾಣವಾಗಿದೆ. ಖ್ಯಾತ ಶಿಲ್ಪಿಗಳಾದ ರಾಜ ಗೋಪಾಲಾಚಾರ್ಯ ಮತ್ತು ಸಹಾಯಕರು ಬಹಳ ಸುಂದರ ಕೆತ್ತನೆಯ ಮೂಲಕ ಈ ರಥವನ್ನು ನಿರ್ಮಿಸಿದ್ದಾರೆ.
ಶ್ರೀ ದೇವಾಲಯದಲ್ಲಿ ಈಗಾಗಲೇ ಪಲ್ಲಕ್ಕಿ ಉತ್ಸವ ನಡೆಯುತ್ತಿದೆ. ಇದೀಗ ರಥ ನಿರ್ಮಾಣದ ಜೊತೆ ರಾಜಾಂಗಣ ಚಾವಣಿಯನ್ನು ನವೀಕರಿಸಲಾಗಿದೆ. ಕ್ಷೇತ್ರದ ಈಗಿನ ಆಡಳಿತ ಮಂಡಳಿಯು ತಾರಾನಾಥ ರೈ ಪಡ್ಡಂಬೈಲು ಗುತ್ತು ಇವರ ನೇತೃತ್ವದ ಯುವ ಉತ್ಸಾಹಿ ಸದಸ್ಯರ ತಂಡವಾಗಿದ್ದು ದೇವಸ್ಥಾನದ ಅಭಿವೃದ್ಧಿಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡ್ಡಿದ್ದು ಭಕ್ತರ ಮನ ಗೆದ್ದಿದ್ದಾರೆ.