ನವದೆಹಲಿ: ಕನ್ನಡಕ್ಕೀಗ ಜಾಗತಿಕ ಮನ್ನಣೆ ಬಂದಿದೆ. ಜಗತ್ಪ್ರಸಿದ್ಧ ವ್ಯಾಟಿಕನ್ ಚರ್ಚ್ ಇನ್ನು ಮುಂದೆ ತನ್ನ ಸುದ್ದಿಗಳನ್ನು ಕನ್ನಡದಲ್ಲಿ ಪ್ರಕಟಿಸಲು ಕ್ರಮ ಕೈಗೊಂಡಿದೆ. ವ್ಯಾಟಿಕನ್ ಮಾಧ್ಯಮ ಔಟ್ಲೆಟ್ ಬಳಸುವ 53 ನೇ ಭಾಷೆಯಾಗಿ ಕನ್ನಡ ಸೇರ್ಪಡೆಗೊಂಡಿದೆ.
ಕನ್ನಡ ಕರ್ನಾಟಕ ಮತ್ತು ಅದರ ಸುತ್ತಮುತ್ತಲಿನ ಅಂದಾಜು 40 ಮಿಲಿಯನ್ ಜನರು ಮಾತನಾಡುತ್ತಾರೆ. ಕ್ಯಾಥೊಲಿಕ್ ಧರ್ಮವು ವಿಸ್ತರಿಸುಸುವ ಹಿನ್ನೆಲೆಯಲ್ಲಿ ಚರ್ಚ್ ತನ್ನ ಅನುಯಾಯಿಗಳೊಂದಿಗೆ ಉತ್ತಮವಾಗಿ ಸಂವಹನ ನಡೆಸಲು ಇದು ಸಹಾಯ ಮಾಡುತ್ತದೆ.
'ಪೋಪ್ ಮತ್ತು ವ್ಯಾಟಿಕನ್ ಚರ್ಚ್ ವಿಶ್ವದ ಸುದ್ದಿಗಳನ್ನು ಸ್ಥಳೀಯ ಭಾಷೆಯಲ್ಲಿ ಚರ್ಚ್‌ಗಳಿಗೆ ತಲುಪಿಸಲು ಆಸಕ್ತಿ ಮತ್ತು ಪ್ರಾಮುಖ್ಯತೆ ನೀಡುತ್ತದೆ ಎಂದು ಬೆಂಗಳೂರಿನ ಆರ್ಚ್‌ಬಿಷಪ್ ಪೀಟರ್ ಮಚಾಡೊ ವ್ಯಾಟಿಕನ್ ನ್ಯೂಸ್‌ನಲ್ಲಿ ಕನ್ನಡ ಹೊಸ ಸೇರ್ಪಡೆಯನ್ನು ಪ್ರಕಟಿಸಿದರು.
ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ ಮಾತನಾಡಿ, ವ್ಯಾಟಿಕನ್ ಕನ್ನಡವನ್ನು ತನ್ನ ಭಾಷೆಗಳಲ್ಲಿ ಒಂದಾಗಿ ಗುರುತಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಇದು ಕರ್ನಾಟಕದ ಜನತೆಗೆ ಉಪಯೋಗವಾಗಲಿದೆ. ಇಲ್ಲಿಯವರೆಗೆ ವ್ಯಾಟಿಕನ್ ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಪ್ರಸಾರ ಮಾಡುತ್ತಿತ್ತು. ಪರಿಚಯಿಸಿದ ನಾಲ್ಕನೇ ಭಾರತೀಯ ಭಾಷೆ ಕನ್ನಡ. ಸಾಮಾನ್ಯ ಸರ್ಕಾರಿ ಚಾನೆಲ್‌ಗಳಿಗಿಂತ ಇಲ್ಲಿ ಮಾಹಿತಿಯನ್ನು ಪೋಸ್ಟ್ ಮಾಡಲು ಹೆಚ್ಚಿನ ಪ್ರೋಟೋಕಾಲ್‌ಗಳಿವೆ. ವ್ಯಾಟಿಕನ್‌ನಲ್ಲಿ 1931ರಲ್ಲಿ ರೇಡಿಯೋವನ್ನು ಕಂಡುಹಿಡಿದ ಮಾರ್ಕೋನಿ ಸ್ಥಾಪಿಸಿದ ರೇಡಿಯೋ ಸ್ಟೇಷನ್ ಇದೆ. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಸಂವಹನ ಮುಖ್ಯಸ್ಥರಾಗಿರುವ ಫಾದರ್ ಸಿರಿಲ್ ವಿಕ್ಟರ್ ಪ್ರಕಾರ, ಈ ಯೋಜನೆಗೆ ಸುಮಾರು 24 ತಿಂಗಳು ಸಿದ್ಧತೆ ನಡೆದಿತ್ತು. ಕಳೆದ ಮೂರು ತಿಂಗಳು ತೀವ್ರಚಟುವಟಿಕೆ ತೀವ್ರಗೊಂಡಿದ್ದು ಅಂತಿಮವಾಗಿ ಮಂಗಳವಾರದಿಂದ ಕಾರ್ಯಾರಂಭವಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ಜನಗಣತಿಯ ಪ್ರಕಾರ ಭಾರತದ 1.4 ಶತಕೋಟಿ ಜನರಲ್ಲಿ ಎರಡು ಪ್ರತಿಶತಕ್ಕಿಂತ ಹೆಚ್ಚು ಕ್ರಿಶ್ಚಿಯನ್ನರು, ಅವರಲ್ಲಿ ಹೆಚ್ಚಿನವರು ಕ್ಯಾಥೊಲಿಕ್ ರು. ಇವರು ಸರಿಸುಮಾರು 20 ಮಿಲಿಯನ್ ಜನರಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಪ್ರತಿಶತ 80ಕ್ಕೂ ಹೆಚ್ಚು ಜನರು ಹಿಂದು ಧರ್ಮವನ್ನು ಪ್ರತಿನಿಧಿಸುತ್ತಾರೆ.
ವಿಶ್ವದ ಪ್ರಾಚೀನ ದ್ರಾವಿಡ ಭಾಷೆಯಾದ ಕನ್ನಡವನ್ನು ವ್ಯಾಟಿಕನ್ ಮಾನ್ಯಮಾಡಿರುವುದು ಕನ್ನಡಿಗರು ಮತ್ತು ಆ ಮೂಲಕ ಭಾರತೀಯ ಸಂಸ್ಕೃತಿಗೆ ಗೌರವ ನೀಡಿದಂತಾಗಿದೆ ಎಂದು ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಪಾವೊಲೊ ರುಫಿನಿ ಹೇಳಿದ್ದಾರೆ.
ವ್ಯಾಟಿಕನ್ ನ್ಯೂಸ್ ನ ಅಧಿಕೃತ ಭಾಷೆ ಇಟಾಲಿಯನ್ ಆಗಿದೆ. ಪೋರ್ಟಲ್ನಲ್ಲಿ ತನ್ನ ಸುದ್ದಿಗಳನ್ನು ಭಾಷಾಂತರಿಸುವ ಇತರ ಯುರೋಪಿಯನ್ ಅಲ್ಲದ ಭಾಷೆಗಳಲ್ಲಿ ಮಂಗೋಲಿಯನ್, ಮಲಯಾಳಂ, ತಮಿಳು, ಹಿಂದಿ, ಸ್ವಾಹಿಲಿ ಮತ್ತು ಅಂಹರಿಕ್ ಸೇರಿವೆ.