HEALTH TIPS

ಅಭಿವೃದ್ಧಿ ಕಾಮಗಾರಿ-ಇಂದು ರಾತ್ರಿಯಿಂದ ಕಾಸರಗೋಡು ನಗರದಲ್ಲಿ ಹೆದ್ದಾರಿ ಬಂದ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ತಲಪ್ಪಾಡಿ-ಚೆಂಗಳ ರೀಚ್‍ನ ಕರಂದಕ್ಕಾಡಿನಿಂದ ಆರಂಭಗೊಂಡು ನುಳ್ಳಿಪ್ಪಾಡಿ ವರೆಗಿನ ಹಾದಿಯಲ್ಲಿ ಹೊಸ ಬಸ್ ನಿಲ್ದಾಣದಿಂದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಮಂದಿರದ ವರೆಗೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ಏ. 17ರಂದು ರಾತ್ರಿ 9ರಿಂದ ಏ. 18ರ ಬೆಳಗ್ಗೆ 7.30ರ ವರೆಗೆ ಈ ಹಾದಿಯಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. 

ಮೇಲ್ಸೇತುವೆ ಕಾಮಗಾರಿಗಾಗಿ ಗರ್ಡರ್‍ಗಳನ್ನು ಅಳವಡಿಸುವ ಕೆಲಸ ನಡೆಯಲಿದ್ದು, ಹೊಸ ಬಸ್ ನಿಲ್ದಾಣದಿಂದ ಸುಮಾರು 150ಮೀ. ವರೆಗೆ ಹೆದ್ದಾರಿ ಮುಚ್ಚಲಾಗುವುದು. ಈ ಹಿನ್ನೆಲೆಯಲ್ಲಿ ಮಂಗಳೂರು-ಕಾಞಂಗಾಡು ರೂಟಲ್ಲಿ ಸಂಚರಿಸುವ ವಾಹನಗಳು ಕೆಎಸ್‍ಟಿಪಿ ರಸ್ತೆ ಮೂಲಕ, ಕಾಸರಗೊಡು-ಚೆಂಗಳ ಮಧ್ಯೆ ಸಂಚರಿಸುವ ವಾಹನಗಳು ಮಧೂರು ರಸ್ತೆ ಮತ್ತು ಚೌಕಿ-ಉಳಿಯತ್ತಡ್ಕ ಹಾದಿಯಾಗಿ ಸಾಗುವಂತೆ ನಿರ್ಮಾಣ ಸಂಸ್ಥೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries