ತಿರುವನಂತಪುರಂ: ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಿಪಿಎಂ ನೇತೃತ್ವದ ಎಲ್‍ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವಿನ ಸಂಪರ್ಕ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಕೇರಳ ಬಿಜೆಪಿ ಜವಾಬ್ದಾರಿ ವಹಿಸಿರುವ ಕೇಂದ್ರ ಪ್ರಭಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸುದೀರ್ಘ ಸಂಪ್ರದಾಯವನ್ನು ಹೊಂದಿರುವ ರಾಜಕೀಯ ಪಕ್ಷವಾದ ಕಾಂಗ್ರೆಸ್‍ಗೆ ಭಯೋತ್ಪಾದಕ ಸಂಘಟನೆಗಳ ಸಂಪರ್ಕದಿಂದ ದೇಶ ಮತ್ತು ಕೇರಳದ ಮತದಾರರು ಬೆಚ್ಚಿಬಿದ್ದಿದ್ದಾರೆ.
ಪಿಎಫ್‍ಐ ಎಸ್‍ಡಿಪಿಐಯ ರಾಜಕೀಯ ಮುಖವಾಗಿದ್ದು, ಕಾನೂನಿನಿಂದ ನಿಷೇಧಿಸಲಾಗಿದೆ. ಭಯೋತ್ಪಾದಕ ನಂಟು ಹೊಂದಿರುವ ಎಸ್‍ಡಿಪಿಐ ನೆರವನ್ನು ಕೇರಳದ ಎರಡು ಮೋರ್ಚಾಗಳು ಸ್ವೀಕರಿಸುತ್ತಿವೆ ಎಂದರು. ಎನ್‍ಡಿಎ ರಾಜ್ಯ ಚುನಾವಣಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಿಎಫ್‍ಐ ವಿರುದ್ಧ 3500ಕ್ಕೂ ಹೆಚ್ಚು ಪ್ರಕರಣಗಳಿವೆ. 100ಕ್ಕೂ ಹೆಚ್ಚು ಪಿಎಫ್ ಐ ಸದಸ್ಯರು ಜೈಲಿನಲ್ಲಿದ್ದಾರೆ. ಈ ಸಂಘವು ಕೇರಳದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಇದೆ. ಕಾಂಗ್ರೆಸ್ ಹೆಚ್ಚಾಗಿ ಪಾಕಿಸ್ತಾನ, ಭಯೋತ್ಪಾದಕ ಸಂಘಟನೆಗಳು ಮತ್ತು ಚೀನಾದ ಧ್ವನಿಯಾಗಿದೆ. ಇದಕ್ಕೆ ಕೇರಳದ ಕಾಂಗ್ರೆಸ್ ನಾಯಕರು ಉತ್ತರಿಸಬೇಕು. ರಾಹುಲ್ ಗಾಂಧಿ, ಸತೀಶನ್, ತರೂರ್ ಮತ್ತು ಸುಧಾಕರನ್ ಮೌನವಾಗಿದ್ದು, ಕಾಂಗ್ರೆಸ್ ದೇಶದ ಭದ್ರತೆಯನ್ನು ಹಾಳು ಮಾಡುತ್ತಿದೆ. ರಾಹುಲ್ ಗಾಂಧಿಗೆ ಅಮೇಠಿಯಲ್ಲಿ ಜನರು ನೀಡಿದ ಉತ್ತರವನ್ನು ವಯನಾಡಿನಲ್ಲೂ ನೀಡಲಿದ್ದಾರೆ.
ಒಂದು ತಿಂಗಳ ಹಿಂದೆ, ರಂಜಿತ್ ಅನ್ನು ಕೊಂದ ಪಿಎಫ್ ಐ ಗೂಂಡಾಗಳಿಗೆ ಮರಣದಂಡನೆ ವಿಧಿಸಲಾಯಿತು. ಅವರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲ ನೀಡುತ್ತಿವೆ. ಎಸ್‍ಡಿಪಿಐ ತನ್ನ ಬೆಂಬಲವನ್ನು ಘೋಷಿಸಿರುವುದನ್ನು ಕಾಂಗ್ರೆಸ್ ಇನ್ನೂ ನಿರಾಕರಿಸಿಲ್ಲ. ಹೋರಾಟಗಾರರನ್ನು ಬೆಂಬಲಿಸುವಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ಪೈಪೆÇೀಟಿ ನಡೆಸುತ್ತಿವೆ.
ಕಾಂಗ್ರೆಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಸಿಪಿಎಂ ಹೇಳುತ್ತಿದೆ ಮತ್ತು ಬಿಜೆಪಿಯೊಂದಿಗೆ ಸಿಪಿಎಂ ಮೈತ್ರಿ ಇದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಮೂರು ದಿನಗಳ ಹಿಂದೆ ರಾಹುಲ್ ಗಾಂಧಿ ಮತ್ತು ಎಲ್ ಡಿಎಫ್ ನಾಯಕರು ಕೈ ಜೋಡಿಸಿ ವೇದಿಕೆ ಹಂಚಿಕೊಂಡಿದ್ದರು. ಕೇರಳದ ಜನರೊಂದಿಗೆ ಬಿಜೆಪಿಗೆ ನಂಬಿಕೆ ಇದೆ ಎಂದವರು ತಿಳಿಸಿರುವರು.