ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಪ್ರಧಾನ ಆರ್ಚಕ,ಆಡಳಿತ ಮೊಕ್ತೇಸರ ಅರಿಬೈಲು ನಿವಾಸಿ ಎ. ರಾಧಾಕೃಷ್ಣ ಅರಿನಾಯ (80) ಹೃದಯಘಾತದಿಂದ ನಿನ್ನೆ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಕುಸುಮ, ಮಕ್ಕಳಾದ ಸೌಮ್ಯ, ಸುಹಾನ್, ಅಳಿಯ ಚೇತನ್, ಸಹೋದರ ರಾಮ್ ಮೋಹನ್, ಸಹೋದರಿ ಸುಧಾ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ನಿಧನಕ್ಕೆ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಸಂತಾಪ ಸೂಚಿಸಿದ್ದಾರೆ.