ಕಾಸರಗೋಡು: ಲೋಕಸಭಾ ಚುನಾವಣೆ ಅಂಗವಾಗಿ ಪ್ರಕಟಿಸಲಾಗುತ್ತಿರುವ ಪ್ರಚಾರ ಸಾಮಗ್ರಿಗಳಲ್ಲಿ ಕ್ಯೂಆರ್ ಕೋಡ್ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವಂತೆ ಹಸಿರು ಚುನಾವಣಾ ನೋಡಲ್ ಅಧಿಕಾರಿ ಎ.ಲಕ್ಷ್ಮಿ ನಿರ್ದೇಶ ನೀಢಿದ್ದಾರೆ.
ಮಾನವ ಮತ್ತು ಪರಿಸರಕ್ಕೆ ವಿಪತ್ತಾಗಿರುವ ಅಪಾಯಕಾರಿ ಪ್ಲಾಸ್ಟಿಕ್, ಪಿವಿಸಿ, ಒಂದು ಸಲ ಮಾತ್ರ ಬಳಸಿ ಎಸೆಯುವ ವಸ್ತುಗಳನ್ನು ಚುನಾವಣಾ ಪ್ರಕ್ರಿಯೆಗಳಿಗೆ ಬಳಸದೆ, ಸಾಧ್ಯವಾದಷ್ಟು ಮರುಬಳಕೆ ಮಾಡಬಹುದಾದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ, 2024 ರ ಲೋಕಸಭಾ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ವಿವಿಧ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಫಲಕಗಳು, ಬ್ಯಾನರ್‍ಗಳು ಇತ್ಯಾದಿಗಳನ್ನು ತಯಾರಿಸಲು ಪ್ಲಾಸ್ಟಿಕ್ ಮತ್ತು ಪಿವಿಸಿ ವಸ್ತುಗಳನ್ನು ಬಳಸುವ ಬದಲು ಪರಿಸರ ಸ್ನೇಹಿ ವಸ್ತುಗಳನ್ನು ಮಾತ್ರ ಬಳಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಪ್ರಚಾರ ಮತ್ತು ಅಲಂಕಾರಕ್ಕಾಗಿ ಬಳಸುವ ಧ್ವಜಸ್ತಂಭಗಳು ಸಂಪೂರ್ಣವಾಗಿ ಪ್ಲಾಸ್ಟಿಕ್ ಮತ್ತು ಪಿವಿಸಿ ಮುಕ್ತವಾಗಿರಬೇಕು.
ಪ್ರಚಾರಕ್ಕಾಗಿ ಪಿವಿಸಿ ಫ್ಲಕ್ಸ್, ಬ್ಯಾನರ್, ಬೋರ್ಡ್ ಮತ್ತು ಪ್ಲಾಸ್ಟಿಕ್ ಧ್ವಜ ಕಂಬಗಳನ್ನು ಯಾವುದೇ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಬಳಸಬಾರದು. ಪಿವಿಸಿ ಹಾಗೂ ಪ್ಲಾಸ್ಟಿಕ್ ಬೆರೆಸಿರುವ ಕೊರಿಯನ್ ಬಟ್ಟೆ, ನೈಲಾನ್, ಪೆÇಲಿಸ್ಟರ್, ಪೆÇಲಿಸ್ಟರ್ ಫ್ಯಾಬ್ರಿಕ್, ಬೋರ್ಡ್ ಮತ್ತು ಪ್ಲಾಸ್ಟಿಕ್ ಅಂಶ ಅಥವಾ ಪ್ಲಾಸ್ಟಿಕ್ ಲೇಪನದೊಂದಿಗೆ ಮರುಬಳಕೆ ಮಾಡಲಾಗದ ಎಲ್ಲಾ ವಸ್ತುಗಳನ್ನು ಬಳಸದಿರುವಂತೆ ಸೂಚಿಸಲಾಗಿದೆ. ಹತ್ತಿ, ಕಾಗದ, ಪೆÇಲಿ-ಎಥಿಲೀನ್ ಮುಂತಾದ ಶೇಕಡಾ ನೂರು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಬ್ಯಾನರ್ ಅಥವಾ ಬೋರ್ಡ್‍ಗಳನ್ನು ಮುದ್ರಿಸಿ ಪ್ರಚಾರಕ್ಕೆ ಬಳಸುವಂತೆ ಸೂಚಿಸಲಾಗಿದೆ.
ನಿಷೇಧಿತ ಉತ್ಪನ್ನಗಳನ್ನು ಪ್ರಚಾರಕ್ಕೆ ಬಳಸುವುದು ಕಂಡು ಬಂದರೆ ಜಿಲ್ಲಾ ಚುನಾವಣಾಧಿಕಾರಿಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ರಾಷ್ಟ್ರೀಯ ಪಕ್ಷಗಳ ಚುನಾವಣಾ ಕಚೇರಿಗಳನ್ನು ಅಲಂಕರಿಸಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಮತಗಟ್ಟೆಗಳನ್ನು ಸ್ಥಾಪಿಸುವಾಗ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದಂತೆ ಸಂಬಂಧಿಸಿದ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಹಸಿರು ಚುನಾವಣಾ ನೋಡಲ್ ಅಧಿಕಾರಿ ತಿಳಿಸಿದ್ದಾರೆ.